ರನ್ಯಾರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್: ಇಡಿ ಅಧಿಕಾರಿಗಳಿಂದ 8 ಕಡೆ ದಾಳಿ, ಪರಿಶೀಲನೆ

ಬೆಂಗಳೂರು,ಮಾರ್ಚ್,13,2025 (www.justkannada.in):  ನಟಿ ರನ್ಯಾರಾವ್ ಚಿನ್ನ ಕಳ್ಳಸಾಗಾಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಇಡಿ ಅಧಿಕಾರಿಗಳ ಎಂಟ್ರಿ ಕೊಟ್ಟಿದ್ದು ಬೆಂಗಳೂರಿನ 8 ಕಡೆಗಳಲ್ಲಿ ದಾಳಿ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಗೋಲ್ಡ್ ಸ್ಮಗ್ಲಿಂಗ್ ಕೇಸ್ ನಲ್ಲಿ ಸಿಲುಕಿ ನಟಿ ರನ್ಯಾರಾವ್ ನ್ಯಾಯಾಂಗ ಬಂಧನದಲ್ಲಿದ್ದು ಇದೀಗ ಪ್ರಕರಣ ಸಂಬಂಧ ರನ್ಯಾರಾವ್ ಮತ್ತು ಪತಿ ಜತಿನ್ ಗೆ ಸೇರಿದ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ಬೆಂಗಳೂರಿನ ಕೋರಮಂಗಲ, ಇಂದಿರಾನಗರ ಸೇರಿದಂತೆ 8 ಕಡೆಗಳಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ ಪರಿಶೀಲಿಸಿದ್ದಾರೆ. ಪ್ರಕರಣ ಸಂಬಂಧ ಸಿಬಿಐ ಬಳಿಕ ಇದೀಗ ಇಡಿಯಿಂದಲೂ ತನಿಖೆ ಆರಂಭವಾಗಿದೆ.

Key words: Ranya Rao,  gold smuggling, case, ED, raid