ಗ್ಯಾರಂಟಿ ಯೋಜನೆ : M2M ಸಂಸ್ಥೆಗೆ 1ಕೋಟಿ ಮತ್ತು ರೈಟ್ಸ್ ಪೀಪಲ್ ಸಂಸ್ಥೆಗೆ 9 ಕೋಟಿ ನೀಡಲಾಗಿದೆ.

Guarantee Scheme: Rs 1 crore has been given to M2M and Rs 9 crore to Rights People.

 

ಬೆಂಗಳೂರು, ಮಾ.೧೩, ೨೦೨೫:  ಗ್ಯಾರಂಟಿ ಯೋಜನೆ ಅನುಷ್ಠಾನ ಮೌಲ್ಯಮಾಪನ ಮತ್ತು ನಿರ್ವಹಣೆ ಕುರಿತು ಕಾವೇರಿದ ಚರ್ಚೆ ವಿಧಾನ ಪರಿಷತ್‌ ನಲ್ಲಿ ನಡೆಯಿತು.

ಗ್ಯಾರಂಟಿ ಯೋಜನೆ ಮೌಲ್ಯಮಾಪನ, ನಿರ್ವಹಣೆ ಯಾರು ಮಾಡ್ತಿದ್ದಾರೆ ಅಂತ ಪ್ರಶ್ನೆ.? ಮುಂಬಯಿ ಮೂಲದ ಸಂಸ್ಥೆ ನಿರ್ವಹಣೆ ಮಾಡ್ತಿದೆಯಾ..? ಎಂಬ ಪ್ರಶ್ನೆಗೆ M2M ಮೀಡಿಯಾ ನೆಟ್ವರ್ಕ್ ಗೆ ಕೊಡಲಾಗಿದೆ. ಮೌಲ್ಯಮಾಪನಕ್ಕೆ ಮುಂಬೈ ಮೂಲದ ಕಂಪನಿಗೆ ನೀಡಲಾಗಿದೆ. ಯಾವುದೇ ಫೀಸ್ ಇಲ್ಲದೆ ಅಜೀಂ ಪ್ರೇಮ್ ಜಿ ಸೇರಿದಂತೆ ಹಲವು ಸಂಸ್ಥೆ ಮಾಡಿಕೊಡ್ತಿವೆ. KTPP ಕಾಯ್ದೆ ವಿನಾಯಿತಿಯಲ್ಲಿ ಟೆಂಡರ್ ಕೊಡಲಾಗಿದೆ. 4G ಎಗ್ಸಿಮ್ಷನ್ ಅಡಿಯಲ್ಲಿ ಟೆಂಡರ್ ನೀಡಿದ್ದೇವೆ.

M2M ಸಂಸ್ಥೆಗೆ ಮಹಿಳಾ ಮಕ್ಕಳ ಇಲಾಖೆಯಿಂದ 29.50 ಲಕ್ಷ, ಆಹಾರ ಪೂರೈಕೆ ಇಲಾಖೆಯಿಂದ 29.50 ಲಕ್ಷ, ಸಾರಿಗೆ ಇಲಾಖೆಯಿಂದ 26.50 ಲಕ್ಷ, ಇಂಧನ ಇಲಾಖೆಯಿಂದ 25.366 ಲಕ್ಷ ಪಾವತಿಸಲಾಗಿದೆ. ಉತ್ತರವನ್ನೇ ಓದುತ್ತಿದ್ದ ಸಭಾನಾಯಕ.

ನಾನು ಉತ್ತರ ನೋಡಿದ್ದೇನೆ, ನಾವು ಕೇಳಿರೋ ಮಾಹಿತಿ ಕೊಡಿ ಅಂತ ಆಗ್ರಹ ಮಾಡಿದ ಜೆಡಿಎಸ್‌ ನ ಸರವಣ. ಆಗ ಮಧ್ಯಪ್ರವೇಶ ಮಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್‌,  ಗೃಹಲಕ್ಷ್ಮಿ ಯೋಜನೆ ಅತ್ತೆ, ಸೊಸೆಗೆ ತಂದಿಡ್ತಿದ್ದೀರಿ ಅಂದ್ರಿ. ಗ್ಯಾರಂಟಿ ಇಂದ ರಾಜ್ಯಕ್ಕೆ ನಷ್ಟ ಅಂತ ಬಿಜೆಪಿ ನಾಯಕರು ಹೇಳಿದ್ರಿ. ಹಣ ಸರಿಯಾಗಿ ಜನರಿಗೆ ಹೋಗ್ತಿದೆಯಾ ಅಂತ ತಿಳಿಯೋಕೆ ಕೆಲ ಏಜೆನ್ಸಿಗಳಿಗೆ ನೀಡಿದ್ದೇವೆ. ಅದಕ್ಕೆ ಇಂತಿಷ್ಟು ಹಣ ಮೀಸಲಿಡಬೇಕು. ಅನುಷ್ಠಾನಕ್ಕೆ ಕಾರ್ಯಕರ್ತರನ್ನ ನೇಮಕ ಮಾಡಿದ್ದೇವೆ. ಅವರಿಗೆ ವೇತನ ಕೂಡ ಕೊಡ್ತಿದ್ದೇವೆ. ಅದಕ್ಕೆ ವಿಧಾನಸಭೆಯಲ್ಲಿ ನಿಮ್ಮ ಶಾಸಕರೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಅಂತ ತಿಳಿಸಿದ ಡಿಸಿಎಂ.

ಆಗ ಡಿಸಿಎಂ ವಿರುದ್ಧ ಆಕ್ರೋಶ ಹೊರ ಹಾಕಿದ ವಿಪಕ್ಷಗಳು. ಸಾಮೂಹಿಕವಾಗಿ ಎದ್ದು ಜನರ ತೆರಿಗೆ ಹಣ ಯಾಕೆ ಸಂಬಳವಾಗಿ ಕೊಡ್ತೀರಿ.? ಸರ್ಕಾರದ ಹಣ ಕಾಂಗ್ರೆಸ್ ಕಾರ್ಯಕರ್ತರಿಗೆ ಯಾಕೆ ಕೊಡ್ತೀರಿ ಅಂತ ಆಕ್ರೋಶ. ಗ್ಯಾರಂಟಿ ಜನರಿಗೆ ಕೊಡಿ, ಕಾಂಗ್ರೆಸ್ ಕಾರ್ಯಕರ್ತರಿಗಲ್ಲ ಅಂತ ವಿರೋಧ.

ಈ ವೇಳೆ ಸಮರ್ಪಕ ಉತ್ತರ ಇಲ್ಲ ಅಂತ ಬಾವಿಗಿಳಿಯಲು ಮುಂದಾದ ಬಿಜೆಪಿ, ಜೆಡಿಎಸ್ ಸದಸ್ಯರು. ಆಗ ಮಧ್ಯಪ್ರವೇಶ ಮಾಡಿ, ಕುಳಿತುಕೊಳ್ಳಲು ಸೂಚಿಸಿದ ಸಭಾಪತಿ. ಈ ನಡುವೆ ಬಾವಿಗಿಳಿದು ಪ್ರಶ್ನೆ ಮಾಡಿದ ಸರವಣ.

ಈ ವೆಳೆ ನಿಮ್ಮ ರಾಜಕಾರಣ ನೀವು ಮಾಡಿ, ನಮ್ಮ‌ರಾಜಕಾರಣ ನಾವು ಮಾಡ್ತೀವಿ ಎಂದ ಡಿಸಿಎಂ ಡಿಕೆಶಿ.

ಕಾಂಗ್ರೆಸ್ ಕಾರ್ಯಕರ್ತರ ಅನುಷ್ಠಾನ ಸಮಿತಿ ರದ್ದು ಮಾಡುವಂತೆ ಆಗ್ರಹ ಮಾಡಿದ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ.

ಕಾಂಗ್ರೆಸ್ ಅನುಷ್ಠಾನ ಸಮಿತಿ ರದ್ದು ಮಾಡಿ ಅಂತ ಪ್ರತಿಭಟನೆ. ಈ ವೇಳೆ ಗಾಂಧೀಜಿ ಹೆಸರು ಹೇಳೋಕೆ ನಿಮಗೆ ನಾಚಿಕೆ ಆಗಬೇಕು ಅಂತ ಆಕ್ರೋಶ ಹೊರ ಹಾಕಿದ ಸಿ.ಟಿ ರವಿ. ಮಧ್ಯಪ್ರವೇಶ ಮಾಡಿದ ಸಭಾಪತಿ ಹೊರಟ್ಟಿ. ಇದು ಪ್ರಶ್ನೋತ್ತರ ಕಲಾಪ. ಇಲ್ಲಿ ಸಮರ್ಪಕ ಉತ್ತರ ಬಾರದಿದ್ರೆ, ಬರೆದು ಕೊಡಿ. 30 ನಿಮಿಷಗಳ ಕಾಲ ಚರ್ಚೆಗೆ ಅವಕಾಶ ಮಾಡಿಕೊಡ್ತೇನೆ ಅಂತ ಸಲಹೆ.

M2M ಮೀಡಿಯಾ ನೆಟ್ವರ್ಕ್ ಮತ್ತು ಕಾಂಗ್ರೆಸ್ ಅನುಷ್ಠಾನ ಸಮಿತಿ ಎರಡಕ್ಕೂ ತೆರಿಗೆ ಹಣ ಬಳಕೆಗೆ ವಿರೋಧ. ನಮ್ಮನ್ನ ಕನ್ವೆನ್ಸ್ ಮಾಡಿ, ಕನ್ಫ್ಯೂಸ್ ಮಾಡಬೇಡಿ ನಾವು ಕೂರ್ತೀವಿ ಎಂದ ಜೆಡಿಎಸ್‌ ನ  ಭೋಜೇಗೌಡ.

ಸ್ಪಷ್ಟನೆ:

ನಾವು ಸರ್ಕಾರದ ಹಣವನ್ನೇ ಏಜೆನ್ಸಿಗಳಿಗೆ ಕೊಟ್ಟಿದ್ದೇವೆ. ಏಜೆನ್ಸಿಗಳಿಗೂ ಸರ್ಕಾರದ ಹಣ ಕೊಡ್ತಿರೋದಾಗಿ ಒಪ್ಪಿಕೊಂಡ ಸರ್ಕಾರ. 40-50 ಲಕ್ಷದ ವರೆಗೂ ಕೊಡ್ತೀವಿ. ಇದರಲ್ಲಿ ಮುಚ್ಚಿಡುವ ಯಾವುದೇ ವಿಚಾರ ಇಲ್ಲ. ಡಿಸಿಎಂ ಡಿಕೆಶಿ ಸ್ಪಷ್ಟನೆ.

ಆಗ ಮಧ್ಯಪ್ರವೇಶ ಮಾಡಿದ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ. ನೀವು ಏಜೆನ್ಸಿಗಳಿಗೆ ಕೊಟ್ಟ ಮೇಲೆ, ಅನುಷ್ಠಾನ ಸಮಿತಿ ಯಾಕೆ.? ಅವರಿಗೆ ಸಂಬಳ ಕೊಟ್ಟು, ಜನರಿಂದ ಮಾಹಿತಿ ಪಡೆಯೋದು ಏನಿದೆ.? ಸದನದಲ್ಲಿ ಆಕ್ರೋಶ ಹೊರ ಹಾಕಿದ ಛಲವಾದಿ ನಾರಾಯಣಸ್ವಾಮಿ.

M2M ಸಂಸ್ಥೆಗೆ 1ಕೋಟಿ ಹಣ ನೀಡಲಾಗಿದೆ ಸರಿ. ರೈಟ್ಸ್ ಪೀಪಲ್ ಸಂಸ್ಥೆಗೆ 9 ಕೋಟಿ ಕೊಡಲಾಗಿದೆ. ಇದನ್ನ ಯಾಕೆ ಮುಚ್ಚಿಡಲಾಗಿದೆ..? ಸಿ.ಟಿ ರವಿ ಅದನದಲ್ಲಿ ಪ್ರಶ್ನೆ. ಅರ್ಧ ಗಂಟೆ ಚರ್ಚೆಗೆ ನಿಡೋದಾಗಿ ಹೇಳಿದ ಸಭಾಪತಿ ಹೊರಟ್ಟಿ.

key words: Guarantee Scheme, M2M, Rights People, Karnataka, congress

Guarantee Scheme: Rs 1 crore has been given to M2M and Rs 9 crore to Rights People.