ಸಿಎಂ ಸಿದ್ದರಾಮಯ್ಯರಿಂದ ಸಮತೋಲಿತ ಬಜೆಟ್ ಮಂಡನೆ- ಡಾ.ಪುಷ್ಪಾ ಅಮರನಾಥ್

ಮೈಸೂರು,ಮಾರ್ಚ್,13,2025 (www.justkannada.in): ಸಿಎಂ ಸಿದ್ದರಾಮಯ್ಯ ಎಲ್ಲಾ ವರ್ಗಗಳಿಗೂ ಅನುಕೂಲವಾಗುವಂತೆ ಸಮತೋಲಿತ ಬಜೆಟ್ ಮಂಡನೆ ಮಾಡಿದ್ದಾರೆ ಎಂದು  ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷೆ ಡಾ. ಪುಷ್ಪಾ ಅಮರನಾಥ್ ತಿಳಿಸಿದರು.

ಜಿಲ್ಲಾ ಪಂಚಾಯತ್ ನ ಡಿ.ದೇವರಾಜ ಅರಸು ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ. ಪುಷ್ಪಾ ಅಮರನಾಥ್,  ಸಿಎಂ ಸಿದ್ದರಾಮಯ್ಯ ಮಂಡಿಸಿದ  ಬಜೆಟ್ ಅನ್ನು ಪ್ರತಿಪಕ್ಷ ಬಿಜೆಪಿ ನಾಯಕರು ಇದು ಹಲಾಲ್ ಬಜೆಟ್, ಮುಸ್ಲಿಂ ಬಜೆಟ್ ಎಂದು ಟೀಕಿಸುತ್ತಿದ್ದಾರೆ. ಅಲ್ಪಸಂಖ್ಯಾತರು ಎಂದರೆ ಕೇವಲ ಮುಸ್ಲಿಮರು ಮಾತ್ರವಲ್ಲ. ಜೈನ, ಸಿಖ್, ಬೌದ್ಧ ಸೇರಿದಂತೆ ಇನ್ನಿತರ ಅಲ್ಪಸಂಖ್ಯಾತ ಸಮುದಾಯಗಳು ಸೇರಿವೆ. ಆದರೂ ಬಿಜೆಪಿ ನಾಯಕರು ಅಪಪ್ರಚಾರ ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರ ಜನಪರ ಬಜೆಟ್ ಸಹಿಸಲಾರದೇ ಹೊಟ್ಟೆಕಿಚ್ಚಿನಿಂದ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಗ್ಯಾರಂಟಿ ಸಮಿತಿ ರಚನೆಯಿಂದ ಶಾಸಕರ ಅಧಿಕಾರ ಮೊಟಕಾಗಿಲ್ಲ.

ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ಸಮಿತಿ ರಚಿಸಿರುವುದಕ್ಕೆ ವಿಪಕ್ಷಗಳ ಆಕ್ಷೇಪ, ಕೆಲವು ಶಾಸಕರಿಂದ ತೀವ್ರ ವಿರೋಧ  ವಿಚಾರ ಕುರಿತು ಪ್ರತಿಕ್ರಿಯಿಸಿದ ಡಾ.ಪುಷ್ಮಾ ಅಮರನಾಥ್,   ಸರ್ಕಾರದ ಜನಪರ ಯೋಜನೆಗಳನ್ನು ಜನರಿಗೆ ತಲುಪಿಸಲು ಸಮಿತಿಯ ಅವಶ್ಯಕತೆ ಇದೆ. ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಕೇವಲ ಅಧಿಕಾರಿಗಳಿಂದ ಮಾತ್ರ ಸಾಧ್ಯವಿಲ್ಲ. ಹಾಗಾಗಿ ಸಮಿತಿಗಳ ಅವಶ್ಯಕತೆ ಇದೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಸಮಿತಿ ಇರುವುದರಿಂದ ಜನರಿಗೆ ಯೋಜನೆಗಳನ್ನು ತಲುಪಿಸಲು ಸಾಧ್ಯವಾಗುತ್ತಿದೆ. ಇಡೀ ರಾಜ್ಯಕ್ಕೆ ಕೇವಲ ಹದಿನೈದು ಜನರ ಸಮಿತಿಯನ್ನು ಮಾತ್ರ ರಚನೆ ಮಾಡಲಾಗಿದೆ. ನಮಗೇನು ಸರ್ಕಾರ ಸಂಬಳ ಕೊಡುತ್ತಿಲ್ಲ. ಕೇವಲ ಗೌರವ ಧನ ಕೊಡುತ್ತಿದ್ದು, ಬೇರೆ ಯಾವುದೇ ಸವಲತ್ತುಗಳನ್ನು ಕೊಡುತ್ತಿಲ್ಲ. ಗ್ಯಾರಂಟಿ ಸಮಿತಿ ರಚನೆಯಿಂದ ಶಾಸಕರ ಅಧಿಕಾರ ಮೊಟಕಾಗಿಲ್ಲ. ಇದರಿಂದ ಶಾಸಕರಿಗೇ ಅನುಕೂಲವಾಗಿದೆ. ನಾವು ಯಾವುದೇ ಆಸೆ ಆಮಿಷದಿಂದ ಈ ಕೆಲಸ ಮಾಡುತ್ತಿಲ್ಲ ಎಂದು ಡಾ ಪುಷ್ಪ ಅಮರನಾಥ್ ಸ್ಪಷ್ಟಪಡಿಸಿದರು.

Key words: CM Siddaramaiah, balanced, budget, Dr. Pushpa Amarnath