ಬೆಂಗಳೂರು ,ಮಾರ್ಚ್,14,2025 (www.justkannada.in): ಬಿಪಿಎಲ್ ಕಾರ್ಡ್ ಹೊಂದಿದ ವಿಕಲಚೇತನರಿಗೆ ಮುಂಬರುವ ದಿನಗಳಲ್ಲಿ ವಿಮೆ ಮೊತ್ತವನ್ನು 5 ಲಕ್ಷ ರೂ. ಗೆ ಏರಿಸಲು ಚಿಂತನೆ ನಡೆಸಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.
ಇಂದು ವಿಧಾನಪರಿಷತ್ ಕಲಾಪದಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಎಂಎಲ್ ಸಿ ವೈ.ಎಂ ಸತೀಶ ಅವರು, ಎಲ್ಲ ರೀತಿಯ ಅಂಗವೈಕಲ್ಯ ಒಳಗೊಂಡ ವಿಮೆ ಯೋಜನೆಗಳಿವೆಯೇ? ವಿಶೇಷವೇತನರಿಗೆ ಯಾವ ರೀತಿಯ ಸೌಲಭ್ಯಗಳಿವೆ ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಅಂಗವಿಕಲತಾ ನಿವಾರಣ ವೈದ್ಯಕೀಯ ಪರಿಹಾರ ನಿಧಿ ಹಾಗೂ ನಿರಾಮಯ ಆರೋಗ್ಯ ವಿಮಾ ಯೋಜನೆ ಇದೆ. ಆದರೆ ಈ ಯೋಜನೆಯನ್ನು ಇನ್ನಷ್ಟು ವಿಸ್ತರಿಸುವ ತೀರ್ಮಾನ ಮಾಡಿದ್ದೇವೆ
ವಿಕಲಚೇತನರಿಗೆ 1 ಲಕ್ಷದವರೆಗೆ ವಿಮೆ ಸೌಲಭ್ಯವಿದೆ. 1 ವರ್ಷಕ್ಕೆ 1 ಲಕ್ಷದವರೆಗೂ ವಿಮೆ ಸೌಲಭ್ಯವಿದೆ ಮುಂಬರುವ ದಿನಗಳಲ್ಲಿ 5 ಲಕ್ಷಕ್ಕೆ ವಿಮೆ ಮೊತ್ತ ಏರಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
Key words: Planning, increase, insurance amount, disabled people, Minister, Lakshmi Hebbalkar