ಮಸೀದಿ ಪುನರಾರಂಭಕ್ಕೆ ಹಿಂದುಗಳ ವಿರೋಧ : ಅದು ಮಸೀದಿಯಲ್ಲ, ಮದರಸಾ ಎಂದ ಮುಸ್ಲೀಮರು

Hindus oppose reopening of mosque: It's not a mosque, it's a madrasa, says Muslims.

ಮೈಸೂರು, ಮಾ.೧೪, ೨೦೨೫: ಇಲ್ಲಿನ  ಕ್ಯಾತಮಾರನಹಳ್ಳಿಯ ಮಸೀದಿ ಬಂದ್ ವಿಚಾರ ಸಂಬಂಧ ಕೋರ್ಟ್‌ ಸೂಚನೆ ಮೇರೆಗೆ ಇಂದು ಮೈಸೂರು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಿತು.

ಈ ಸಭೆಯಲ್ಲಿ ಮೈಸೂರು ನಗರ ಪೊಲೀಸ್‌ ಆಯುಕ್ತೆ ಸೀಮಾ ಲಟ್ಕರ್‌, ಡಿಸಿಪಿ ಮುತ್ತುರಾಜ್‌ ಸಹ ಭಾಗವಹಿಸಿದ್ದರು. ಸಭೆಗೆ ಬಂದಿದ್ದ ಎರಡು ಕೋಮಿನವರನ್ನು ಇಬ್ಬರು-ಮೂರು ಮಂದಿಯಂತೆ ಪ್ರತ್ಯೇಕವಾಗಿ ಕರೆದು ಅವರ ಅಭಿಪ್ರಾಯ ಸಂಗ್ರಹಿಸಲಾಯಿತು. ಈ ವೇಳೆ ಕೆಲವರು ತಮ್ಮ ಮೌಖಿಕವಾಗಿ ಅಭಿಪ್ರಾಯ ತಿಳಿಸಿದರೆ, ಮತ್ತೆ ಕೆಲವರು ಮನವಿ ಪತ್ರದ ಮೂಲಕ ತಮ್ಮ ಅಭಿಪ್ರಾಯವನ್ನು ಜಿಲ್ಲಾಧಿಕಾರಿಗಳಿಗೆ ನೀಡಿದರು.

ದೂರುದಾರ ಗೈರು:

ಮಸೀದಿ ಪುನರಾರಂಭ ಸಂಬಂಧ ಕೋರ್ಟ್‌ ಮೆಟ್ಟಿಲು ಹತ್ತಿದ್ದ ದೂರು ದಾರ ಮುನಾವರ್‌ ಪಾಶ ಇಂದಿನ ಸಭೆಗೆ ಹಾಜರಾಗಿರಲಿಲ್ಲ. ಆದರೆ ನಗರ ಪಾಲಿಕೆ ಮಾಜಿ ಸದಸ್ಯ ಸೇರಿದಂತೆ ಮುಸ್ಲೀಂ ಸಮುದಾಯದ ಕೆಲ ಮುಖಂಡರು ಸಭೆಯಲ್ಲಿ ಹಾಜರಿದ್ದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಭೆ ಬಳಿಕ ಸ್ಥಳೀಯ ಹಿಂದು ಮುಖಂಡ ಶಿವಕುಮಾರ್ ಮಾಧ್ಯಮಗಳ ಬಳಿ ಹೇಳಿಕೆ.

ಯಥಾಸ್ಥಿತಿಯನ್ನ ಜಿಲ್ಲಾಡಳಿತ ಕಾಯ್ದುಕೊಳ್ಳಬೇಕು. ಮಸೀದಿಯಾಗಲಿ ಅಥವಾ ಮತ್ತೊಂದಾಗಲಿ ಯಾವುದು ತೆರೆಯುವುದು ಬೇಡ. ಅದರಿಂದ ಬಹಳ ದೊಡ್ಡ ಕೆಟ್ಟ ಘಟನೆಗಳು ನಡೆದುಹೋಗಿದೆ‌. ಶಾಂತಿ ಸೌಹರ್ಧತೆ ದೃಷ್ಟಿಯಿಂದ ಆ ಸ್ಥಳದಲ್ಲಿ ಯಾವ ಚಟುವಟಿಕೆಯೂ ಆರಂಭವಾಗುವುದು ಬೇಡ‌. ಈ ಬಗ್ಗೆ ನಾವು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದೇವೆ. ಸದ್ಯ ಎಲ್ಲರೂ ಶಾಂತಿಯುತವಾಗಿ ಬದುಕಿತ್ತಿದ್ದೇವೆ , ಅದೇ ರೀತಿ ಮುಂದುವರೆಬೇಕೆಂದು ಬಯಸುತ್ತೇವೆ‌.

ಕ್ಯಾತಮಾರನಹಳ್ಳಿ ಮಸೀದಿ ಓಪನ್ ಬೇಡ ಅಂತ  ಜಿಲ್ಲಾಧಿಕಾರಿ ಅವರಿಗೆ ನಮ್ಮ ಅಭಿಪ್ರಾಯ ತಿಳಿಸಿದ್ದೇವೆ. ಡಿಸಿ ಅವ್ರು ಕೋರ್ಟ್ ಏನು ತೀರ್ಮಾನ ಮಾಡತ್ತೆ ಮಾಡಲಿ. ಅವರ ತೀರ್ಮಾನಕ್ಕೆ ನಾವು ಬದ್ದ . ಮೈಸೂರಿನಲ್ಲಿ ಹಿಂದೂ ಮುಖಂಡ ಶಿವಕುಮಾರ್ ಸ್ಪಷ್ಟನೆ.

ವಿವಾದಿತ ಮಸೀದಿ ಬಾಗಿಲು ತೆರೆಯುವ ವಿಚಾರ. ಸಭೆ ಬಳಿಕ ನಗರ ಪಾಲಿಕೆ ಮಾಜಿ‌ ಸದಸ್ಯ ಶೌಕತ್ ಆಲಿ‌ ಮಾಧ್ಯಮಗಳ ಬಳಿ ಹೇಳಿಕೆ.

ಅದು ಮಸೀದಿ ಅಲ್ಲ, ಮದರಾಸ. ಅಲ್ಲಿ ಮದರಸವನ್ನೇ ಮೂರು ನಾಲ್ಕು ವರ್ಷ ನಡೆಸಿದ್ದೇವೆ‌. ಆ ನಂತರ ನಡೆಯಬಾರದ ಒಂದು ಘಟನೆ ನಡೆಯಿತು. ಈಗ ನಮಗೆ ಸೌಹರ್ಧಯುತವಾಗಿ ಮತ್ತೆ ಮದರಸ ನಡೆಸಲು ಅವಕಾಶ ಕೊಡಿ ಎಂದು ಕೇಳಿದ್ದೇವೆ‌. ಇದರಲ್ಲಿ ಯಾವ ರಾಜಕೀಯವೂ ಇಲ್ಲ. ನಮಗೆ ಮದರಸ ನಡೆಸಲು ಅವಕಾಶ ಕೊಡಿ. ಇದು ಮಸೀದಿ ಎಂಬ ಭಾವನೆಯಲ್ಲಿ ಕೆಲವರು ಅದಕ್ಕೆ ವಿರೋಧ ಮಾಡುತ್ತಿದ್ದಾರೆ ಅಷ್ಟೇ, ಅದು ಮಸೀದಿಯಲ್ಲ ಮದರಸ. ನಾವೆಲ್ಲರೂ ಈಗ ಅಣ್ಣ ತಮ್ಮಂದಿರ ರೀತಿ ಇದೀವಿ.

ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ನಂತವರು ಪ್ರಚೋದನೆಕಾರಿ ಹೇಳಿಕೆ ಕೊಟ್ಟು ಸಮಾಜದಲ್ಲಿ ಅಶಾಂತಿ ಉಂಟುಮಾಡುವ ಕೆಲಸ ಮಾಡುತ್ತಾರೆ. ಸಭೆ ಬಳಿಕ ಮುಸ್ಲಿಂ ಮುಖಂಡ ಶೌಕತ್ ಅಲಿ ಹೇಳಿಕೆ.

ಬಂದೋಬಸ್ತ್‌ :

ಹಿಂದೂ ಕಾರ್ಯಕರ್ತ ರಾಜು ಹತ್ಯೆ ಬಳಿಕ ಮಸೀದಿ ಬಂದ್. ಕಳೆದ 9 ವರ್ಷಗಳಿಂದ ಬಂದ್ ಆಗಿರುವ ವಿವಾದಿತ ಮಸೀದಿ. ವಿವಾದಿತ ಮಸೀದಿ ಓಪನ್ ಮಾಡಿಸುವಂತೆ ಹೈಕೋರ್ಟ್ಗೆ ಅರ್ಜಿ. ವಿವಾದ ಬಗೆ ಹರಿಸುವಂತೆ ಜಿಲ್ಲಾಡಳಿತಕ್ಕೆ ಹೈಕೋರ್ಟ್ ನಿರ್ದೇಶನ. ಈ ಸಂಬಂಧ ಇಂದು ನಡೆದ ಸಭೆ. ಈ  ಹಿನ್ನಲೆ ಡಿಸಿ ಕಚೇರಿ ಬಳಿ ಹಚ್ಚಿನ ಪೋಲಿಸ್ ಬಂದೋಬಸ್ತ್.

key words: reopening of mosque, madrasa, Mysore, police, DC, Udayagiri

Hindus oppose reopening of mosque: It’s not a mosque, it’s a madrasa, says Muslims.