ಬೆಂಗಳೂರಿನ ಜನತೆಗೆ ನೀರಿನ ದರ ಏರಿಕೆ ಫಿಕ್ಸ್ : ಡಿಸಿಎಂ ಡಿಕೆ ಶಿವಕುಮಾರ್ ಸುಳಿವು

ಬೆಂಗಳೂರು,ಮಾರ್ಚ್,14,2025 (www.justkannada.in): ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮದ್ಯ, ಹಾಲಿನ ದರ, ನೋಂದಣಿ ಶುಲ್ಕ ಹೀಗೆ ಹಲವು ದರ ಏರಿಕೆಯಾಗಿದ್ದು ಇದರಿಂದ ರಾಜ್ಯದ ಜನತೆ ತತ್ತರಿಸಿದ್ದಾರೆ. ಈ ಮಧ್ಯೆ ಇದೀಗ ಬೆಂಗಳೂರಿನ ಜನತೆಗೆ ನೀರಿನ ದರ ಬೀಳಲಿದೆ.

ಹೌದು, ಈ ಕುರಿತು ಮಾತನಾಡಿರು ಡಿಸಿಎಂ ಡಿಕೆ ಶಿವಕುಮಾರ್, ಅಧಿವೇಶನದ ಬಳಿಕ ಬೆಂಗಳೂರಿನಲ್ಲಿ ನೀರಿನ ದರ ಏರಿಕೆ ಮಾಡುವುದಾಗಿ ತಿಳಿಸಿದ್ದಾರೆ.

ಬೆಂಗಳೂರು ಜನತೆಗೆ  ನೀರಿನ ದರ ಏರಿಕೆ ಫಿಕ್ಸ್ , ಪ್ರತಿ ಲೀಟರ್ ನೀರಿಗೆ ಏಳು ಪೈಸೆ ದರ ಏರಿಕೆಗೆ ಪ್ರಸ್ತಾವನೆ ಬಂದಿದೆ. ಆದರೆ ಪ್ರತಿ ಲೀಟರ್ ನೀರಿಗೆ 1 ಪೈಸೆ ಹೆಚ್ಚಳ ಮಾಡಲಾಗುವುದು.  ಅಧಿವೇಶನ ಮುಗಿದ ಬಳಿಕ  ದರ ಹೆಚ್ಚಳವಾಗಲಿದೆ ಎಂದರು.

Key words: DCM, DK Shivakumar, water, Rate, hike, Bengaluru