ಬೆಂಗಳೂರು,ಮಾರ್ಚ್,14,2025 (www.justkannada.in): ಇಂದು ಅಧಿವೇಶನದಲ್ಲಿ ಜೆಡಿಎಸ್ ಎಂಎಲ್ ಸಿ ಟಿಎಸ್ ಶರವಣ ಆಡಿದ ಮಾತಿಗೆ ಗ್ರಾಮೀಣಾಭಿವೃದ್ದಿ ಇಲಾಖೆ ಸಚಿವ ಕೆಂಡಕಾರಿದ ಘಟನೆ ನಡೆಯಿತು.
ವಿಧಾನಪರಿಷತ್ ನಲ್ಲಿ ಮಾತನಾಡಿದ ಜೆಡಿಎಸ್ ಎಂಎಲ್ ಸಿ ಟಿ.ಎ ಶರವಣ, ಪ್ರಿಯಾಂಕ್ ಖರ್ಗೆ ಹಾಲು ಕುಡಿದಷ್ಟು ನಾವು ನೀರು ಕುಡಿದಿಲ್ಲ ಎಂದಿದ್ದರು.
ಈ ಹೇಳಿಕೆ ಕಿಡಿಕಾರಿದ ಸಚಿವ ಪ್ರಿಯಾಂಕ್ ಖರ್ಗೆ, ನಾವು ಹಾಲಾದರೂ ಕುಡಿಯತ್ತೇವೆ ನೀರಾದರೂ ಕುಡಿಯುತ್ತೇವೆ. ಇವರಿಗೆ ಏನು ಬೇಕು? ಯಾಕೆ ಬೇಕು..? ಮೇಲ್ಮನೆಯಲ್ಲೂ ಇದೇ ಕೆಳಮನೆಯಲ್ಲೂ ಇದೇ. ಯಾಕೆ ನನ್ನ ಬಗ್ಗೆ ಅಸಹನೆ. ನನಗೆ ಯಾರ ಕ್ಷಮೆ ಬೇಕಾಗಿಲ್ಲ. ಯಾರ ಕರುಣೆ ಮೇಲೆ ವಿಧಾನಸೌಧಕ್ಕೆ ಬಂದಿಲ್ಲ ಯಾರದ್ದೋ ಭಿಕ್ಷೆಯಿಂದ ಬಂದಿಲ್ಲ.ಅರ್ಹತೆಯಿಂದ ಬಂದಿದ್ದೇನೆ ಎಂದರು.
ಇದಕ್ಕೆ ಉತ್ತರಿಸಿದ ಟಿಎ ಶರವಣ, ಪ್ರಿಯಾಂಕ್ ಖರ್ಗೆ ಬಗ್ಗೆ ನಾನು ಒಳ್ಳೇ ಮನಸ್ಸಿನಿಂದ ಹೇಳಿದ್ದೇನೆ ಅಪಾರ್ಥ ಮಾಡಿಕೊಂಡರೆ ಏನು ಮಾಡಲು ಆಗಲ್ಲ. ಎಲ್ಲವನ್ನೂ ದೇವರು ನೋಡಿಕೊಳ್ಳುತ್ತಾನೆ ಎಂದರು.
Key words: session, Minister Priyank Kharge, MLC, TA Sharavana