EVM ಬಗ್ಗೆ ತಕರಾರು ಇಲ್ಲ, ಕೆಲ ಅನುಮಾನಗಳಿವೆ- ಎಐಸಿಸಿ ವಕ್ತಾರ ಅಭಿಷೇಕ್ ಮನು ಸಿಂಘ್ವಿ

ಮೈಸೂರು,ಮಾರ್ಚ್.15,2025 (www.justkannada.in): ಇವಿಎಂ ಬಗ್ಗೆ ನಮಗೆ ತಕರಾರು ಇಲ್ಲ. ಆದರೆ ಕೆಲ ಅನುಮಾನಗಳಿವೆ ಎಂದು ಎಐಸಿಸಿ ವಕ್ತಾರ ಅಭಿಷೇಕ್ ಮನು ಸಿಂಘ್ವಿ ತಿಳಿಸಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಅಭಿಷೇಕ್ ಮನು ಸಿಂಘ್ವಿ, ಚುನಾವಣಾ ಪ್ರಕ್ರಿಯೆ ಕುರಿತು ನಮಗೆ ಅನುಮಾನವಿದೆ.  ಈ ಬಗ್ಗೆ ನಾವು ಉತ್ತರ ಬಯಸಿದ್ದೇವೆ. ಮಹಾರಾಷ್ಟ್ರ ಸೇರಿ ಕೆಲ ರಾಜ್ಯಗಳಲ್ಲಿ ಮತಗಳ ಸಂಖ್ಯೆ ಹೆಚ್ಚಳವಾಗಿದೆ.  ಇದ್ದಕ್ಕಿತದ್ದಂತೆ ಮತಗಳು ಹೆಚ್ಚಾಗಿದ್ದಕೆ ಅನುಮಾನವಿದೆ. ಸಿಬಿಐ, ಇಡಿ ಐಟಿಯನ್ನ ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ಗುತ್ತಿಗೆಯಲ್ಲಿ ಮುಸ್ಲೀಮರಿಗೆ 4% ಮೀಸಲಾತಿ ಕುರಿತು ಪ್ರತಿಕ್ರಿಯಿಸಿದ ಅಭಿಷೇಕ್ ಮನು ಸಿಂಘ್ವಿ, ಇದು ರಾಜ್ಯ ಸರ್ಕಾರದ ಅಧಿಕಾರ. ಅದನ್ನು ಪ್ರಶ್ನಿಸಬಾರದು. ನ್ಯಾಯಾಲಯಕ್ಕೆ ಹೋಗುವುದಕ್ಕೆ ಬಿಜೆಪಿಗೆ ಅವಕಾಶವಿದೆ ಎಂದರು.

Key words: no dispute, EVM, some doubts,AICC spokesman, Abhishek Manu Singhvi