ತಲೆಯಲ್ಲಿ ಕೂದಲಿಲ್ಲ ಎಂದು ಪತ್ನಿಯಿಂದ ನಿಂದನೆ: ಪತಿ ಆತ್ಮಹತ್ಯೆಗೆ ಶರಣು

ಚಾಮರಾಜನಗರ,ಮಾರ್ಚ್,17,2025 (www.justkannada.in): ತಲೆಯಲ್ಲಿ ಕೂದಲಿಲ್ಲ ಎಂದು ಪತ್ನಿ  ನಿಂದಿಸಿದ್ದಕ್ಕೆ  ಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಾಮರಾಜನಗರದ ಉಡಿಗಾಲ ಗ್ರಾಮದಲ್ಲಿ ನಡೆದಿದೆ.

ಪರಶಿವ (32) ಆತ್ಮಹತ್ಯೆ ಮಾಡಿಕೊಂಡ ಪತಿ. ಪತ್ನಿ ಮಮತಾ ಕಿರುಕುಳ ನೀಡುತ್ತಿದ್ದಾಳೆಂದು ಆರೋಪಿಸಿ ಪತಿ ಪರಶಿವ ಆತ್ಮಹತ್ಯೆಗೆ ಶರಣಾಗಿದ್ದಾರೆ. ರೀಲ್ಸ್ ಗೀಳಿಗೆ ಬಿದ್ದಿದ್ದ ಪತ್ನಿ ಮಮತಾ ರೀಲ್ಸ್ ಗಾಗಿ ಶೋಕಿ ಜೀವನ ನಡೆಸುತ್ತಿದ್ದು, ಈ ಮಧ್ಯೆ ಗಂಡ ಚೆನ್ನಾಗಿಲ್ಲ ಎಂದು ಕಿರುಕುಳ ನೀಡುತ್ತಿದ್ದಳು. ನೀನು ಚೆನ್ನಾಗಿಲ್ಲ, ನನಗೆ ಸರಿಯಾದ ಜೋಡಿಯಲ್ಲ ಅಂತಾ ಎಲ್ಲರೆದುರು ಮಮತಾ ಅವಮಾನ ಮಾಡುತ್ತಿದ್ದಳು ಎನ್ನಲಾಗಿದೆ.

ಅಲ್ಲದೆ ದಿನನಿತ್ಯ ಬ್ರಾಂಡೆಡ್ ಬಟ್ಟೆ, ಅಭರಣ ಕೊಡಿಸುವಂತೆ, ಬೇರೆ ಮನೆ ಮಾಡುವಂತೆ ಪತಿ ಪರಶಿವಗೆ ಮಮತಾ ಪೀಡಿಸುತ್ತಿದ್ದಳು. ಕೊಡಿಸಲ್ಲ, ನನ್ನ ಬಳಿ ಹಣ ಇಲ್ಲ  ಎಂದಿದ್ದ ಪತಿ ಮೇಲೆ ಮಮತಾ ಸುಳ್ಳು ವರದಕ್ಷಿಣೆ ಕೇಸ್ ಹಾಕುವ ಬೆದರಿಕೆ ಹಾಕಿದ್ದಳು ಎನ್ನಲಾಗಿದೆ. ಇದರಿಂದ  ಬೇಸತ್ತ ಪತಿ ಪರಶಿವ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಈ ಕುರಿತು ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Abuse, wife, no hair, head, husband, suicide