ಕೇಂದ್ರ ಸಚಿವ ಹೆಚ್.ಡಿಕೆ ವಿರುದ್ದ ಭೂ ಒತ್ತುವರಿ ಆರೋಪ: ತೆರವು ಕಾರ್ಯಾಚರಣೆ

ರಾಮನಗರ, ಮಾರ್ಚ್, 18,2025 (www.justkannada.in):   ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (ಕುಟುಂಬಕ್ಕೆ ಸೇರಿದ್ದ ಕೇತಗಾನಹಳ್ಳಿ ಜಮೀನಿನಲ್ಲಿ ಒತ್ತುವರಿ ಭೂಮಿಯನ್ನು ತೆರವು ಮಾಡುವಂತೆ ಹೈಕೋರ್ಟ್ ಸೂಚನೆ ನೀಡಿದ್ದ ಬೆನ್ನಲ್ಲೇ ತೆರವು ಕಾರ್ಯಾಚರಣೆ ನಡೆಯುತ್ತಿದೆ.

ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ ಒಡೆತನದ ಬಿಡದಿ ಬಳಿಯ ಕೇತಗಾನಹಳ್ಳಿ ತೋಟದ ಮನೆಯಲ್ಲಿ ಇಂದು ಜೆಸಿಬಿ ಸದ್ದು ಕೇಳಿ ಬಂದಿದೆ. ಭೂ ಒತ್ತುವರಿ ಆರೋಪದ ಹಿನ್ನೆಲೆಯಲ್ಲಿ ಪೊಲೀಸ್ ಭದ್ರತೆಯಲ್ಲಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ.

ಕುಮಾರಸ್ವಾಮಿ ಭೂ ಒತ್ತುವರಿ ತೆರವು ಹಿನ್ನೆಲೆಯಲ್ಲಿ ಕೇತಗಾನಹಳ್ಳಿ ತೋಟದ ಮನೆಗೆ ಡಿಸಿ ಯಶವಂತ್ ವಿ ಗುರುಕರ್ ಭೇಟಿ ನೀಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಡಿಸಿ ಯಶವಂತ ವಿ. ಗುರುಕರ್ ಅವರು, ಕೋರ್ಟ್ ಆದೇಶದಂತೆ ನಾವು ತೆರವು ಕಾರ್ಯಾಚರಣೆ ಮಾಡ್ತಿದ್ದೇವೆ. ಇಲ್ಲಿ 14 ಎಕರೆಗೂ ಹೆಚ್ಚು ಜಾಗ ಕುಮಾರಸ್ವಾಮಿ ಸೇರಿ ಇತರರಿಂದ ಒತ್ತುವರಿ ಆಗಿದೆ. 10ಕ್ಕೂ ಹೆಚ್ಚು ಸರ್ವೇ ನಂಬರ್‌ಗಳನ್ನ ಪರಿಶೀಲನೆ ಮಾಡಿದ್ದೇವೆ. ಒತ್ತುವರಿ ತೆರವು ಮಾಡಿ ಕೋರ್ಟ್‌ಗೆ ವರದಿ ಕೊಡುತ್ತೇವೆ ಎಂದರು.

Key words: Union Minister, HDK, Kethaganahalli, land, encroachment ,clearance