ಕಂದಾಯ ಇಲಾಖೆ ಕಾರ್ಯದರ್ಶಿ  ರಾಜೇಂದ್ರ ಕಠಾರಿಯಾ ವಿರುದ್ಧ ಹಕ್ಕುಚ್ಯುತಿ : ಸ್ಪೀಕರ್ ಯು.ಟಿ.ಖಾದರ್ ಆದೇಶ

ಬೆಂಗಳೂರು, ಮಾ.18, 2025: ಐಎಎಸ್ ಅಧಿಕಾರಿಯ ವಿರುದ್ಧ ಹಕ್ಕುಚ್ಯುತಿ ಮಂಡನೆ. ರಾಜೇಂದ್ರ ಕುಮಾರ್ ಕಠಾರಿಯಾ ಮೇಲೆ ಹಕ್ಕುಚ್ಯುತಿ. ಕಾಂಗ್ರೆಸ್ ಶಾಸಕ ರಾಜುಕಾಗೆ ಮಂಡನೆ. ನನಗೆ ಅವಮರ್ಯಾದೆಯಾಗಿದೆ. ಅಧಿಕಾರಿ ನನ್ನನ್ನ ಅಪಮಾನಿಸಿದ್ದಾರೆ. ರಾಜುಕಾಗೆ ಮಾತಿಗೆ ಎಂಟಿ ಕೃಷ್ಣಪ್ಪ ಧ್ವನಿ. ಬರಿ ಅವರೊಬ್ಬರದೇ ಈ ಸಮಸ್ಯೆಯಲ್ಲ. ಇಲ್ಲಿರುವ ೨೨೪ ಶಾಸಕರಿಗೂ ಸಮಸ್ಯೆ ಇದೆ. ಅಧಿಕಾರಿಗಳಿಂದ ಇಂತಹ ಸನ್ನಿವೇಶ ಎದುರಾಗಿದೆ. ಜೆಡಿಎಸ್ ಶಾಸಕ ಎಂ.ಟಿ.ಕೃಷ್ಣಪ್ಪ ಆರೋಪ.

ಶಾಸಕ ಅರವಿಂದ ಬೆಲ್ಲದ್ ಹೇಳಿಕೆ, ರಾಜುಕಾಗೆ ಒಬ್ಬ ಸಂಬಾವಿತ ಮನುಷ್ಯ. ಅವರಿಗೆ ಈರೀತಿ ಆಗಿರೋದು ಸರಿಯಲ್ಲ. ಆ ಅಧಿಕಾರಿಯ ಮೇಲೆ ಕ್ರಮ‌ಜರುಗಿಸಬೇಕು. ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಒತ್ತಾಯ.

ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಉತ್ತರ, ಕಾಗೆ ಜೊತೆ ಮತ್ತಿಮೂಡ್ ಕೂಡ ಹೇಳಿದ್ದಾರೆ. ಸಿಸಿ ಪಾಟೀಲರು ಹಕ್ಕುಬಾಧ್ಯತಾ ಸಮಿತಿ ಅಧ್ಯಕ್ಷರು. ಪಾಟೀಲರು,ಕಂದಾಯ ಸಚಿವರು,ನನ್ನನ್ನ ಕರೆಯಿರಿ. ಅಲ್ಲಿ ಎಲ್ಲವನ್ನ ಚರ್ಚೆ ಮಾಡೋಣ. ಆನಂತರ ನಿರ್ಧಾರ ಮಾಡೋಣ.

ಬೇಡ ಇಲ್ಲಿ ಕರೆಸಿ ಛೀಮಾರಿ ಹಾಕಿ:

ಅಧಿಕಾರಿಗಳದ್ದು ವರ್ತನೆ ಮಿತಿಮೀರಿದೆ. ಅಲ್ಲಿ ಚರ್ಚೆ ಮಾಡಿ ನಿರ್ಧಾರ ಮಾಡಬೇಡಿ. ಕಾಗಕ್ಕ ಗೂಬಕ್ಕನ ಕಥೆ ಕೇಳೋಕೆ ಆಗಲ್ಲ. ಇಲ್ಲಿ ಕರೆಸಿ ಅವರಿಗೆ ಛೀಮಾರಿ ಹಾಕಿ. ಪ್ರತಿಪಕ್ಷ ನಾಯಕ ಆರ್.ಅಶೋಕ್ ಒತ್ತಾಯ.

ಕಂದಾಯ ಇಲಾಖೆ ಕಾರ್ಯದರ್ಶಿ  ರಾಜೇಂದ್ರ ಕಠಾರಿಯಾ ವಿರುದ್ಧ ಹಕ್ಕುಚ್ಯುತಿ, ಶಾಸಕ ರಾಜು ಕಾಗೆಯಿಂದ ಹಕ್ಕು ಚ್ಯುತಿ ಮಂಡನೆ ಹಿನ್ನೆಲೆ. ಸ್ಪೀಕರ್ ಯು.ಟಿ.ಖಾದರ್ ಹೇಳಿಕೆ.

ಸೌಜನ್ಯ ತೋರದ ಅಧಿಕಾರಿಗಳನ್ನ ಸಹಿಸಲಾಗಲ್ಲ, ಜನಪ್ರತಿನಿಧಿಗಳಿಗೆ ಗೌರವ ಕೊಡಬೇಕು. ಅವರು ಐಎಎಸ್ ಆದ್ರೂ ಇರಲಿ ಯಾರೇ ಇರಲಿ. ಜನಪ್ರತಿನಿಧಿಗಳಿಗೆ ಗೌರವ ಕೊಡಬೇಕು. ಶಾಸಕರು ಕರೆದಾಗ ಅವಮಾನ ಮಾಡುವುದು ಸರಿಯಲ್ಲ. ಇದರ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಇದನ್ನ ಹಕ್ಕುಭಾದ್ಯತಾ ಸಮಿತಿಗೆ ವಹಿಸುತ್ತೇನೆ. ಸದನಕ್ಕೆ ಸ್ಪೀಕರ್ ಯು.ಟಿ.ಖಾದರ್ ಹೇಳಿಕೆ. (privilege motion moved against Revenue Department Secretary Rajendra Katharia)

ಈವೇಳೆ ಹೆಚ್.ಕೆ.ಪಾಟೀಲ್ ಮಧ್ಯಪ್ರವೇಶ :

ನ್ಯಾಚುರಲ್ ಜಸ್ಟೀಸ್ ಪರಿಗಣಿಸಬೇಕು, ಎಲ್ಲವನ್ನ ನೋಡಿ ತೀರ್ಮಾನ ಮಾಡಿ.  ಸ್ಪೀಕರ್ ಗೆ ಸಲಹೆ ನೀಡಿದ ಹೆಚ್.ಕೆ.ಪಾಟೀಲ್

ಈ ವೇಳೆ ಖಾದರ್ ಪ್ರತಿಕ್ರಿಯೆ, ನಾವು ನಮ್ಮ‌ಸಮಯ ಯಾಕೆ ಹಾಳುಮಾಡಬೇಕು. ಶಾಸಕರಿಗೆ ಆದ ಅವಮಾನ ಅವರಿಗೆ ಗೊತ್ತು. ನಮಗೆ ನಿಮಗೇನು ಗೊತ್ತು. ಮತ್ತೆ ಅವರಿಗೆ ಯಾಕೆ ನೋವು ಕೊಡಬೇಕು. ಶಾಸಕರ ಪರವಾಗಿ ನಿಲ್ಲಬೇಕು. ಸ್ಪೀಕರ್ ಯು.ಟಿ.ಖಾದರ್ ತೀರ್ಪು. ಖಾದರ್ ತೀರ್ಪಿಗೆ ಮೇಜುಕುಟ್ಟಿ ಸಂತಸ ಹೊರಹಾಕಿದ ಬಿಜೆಪಿ ಶಾಸಕರು.

key words: privilege motion, Revenue Department Secretary, IAS Rajendra Katharia, Speaker U.T. Khader, congress MLA Rajukage

summary: 

congress MLA Raju kage , privilege motion moved against Revenue Department Secretary Rajendra Katharia: Speaker U.T. Khader orders