ಸದನದಲ್ಲಿ ವಿಪಕ್ಷದ ಕಣ್ತಪ್ಪಿಸಿ ಮುಸ್ಲೀಂ ಮೀಸಲಾತಿ ಬಿಲ್ ಮಂಡಿಸಿದ್ದಾರೆ- ಬಿವೈ ವಿಜಯೇಂದ್ರ

ಬೆಂಗಳೂರು,ಮಾರ್ಚ್,19,2025 (www.justkannada.in): ನಿನ್ನೆ ಸದನದಲ್ಲಿ ವಿಪಕ್ಷದ ಕಣ್ತಪ್ಪಿಸಿ ಮುಸ್ಲೀಮರ ಮೀಸಲಾತಿ ಬಿಲ್ ಮಂಡನೆ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕಿಡಿಕಾರಿದರು.

ಈ ಕುರಿತು ಇಂದು ಮಾತನಾಡಿದ ಬಿವೈ ವಿಜಯೇಂದ್ರ, ಸಿದ್ದರಾಮಯ್ಯ ಸರ್ಕಾರ ನಿನ್ನೆ ಕದ್ದುಮುಚ್ಚಿ ಮೀಸಲಾತಿ ಬಿಲ್ ಮಂಡಿಸಿದೆ.  ವಿರೋಧ ಪಕ್ಷದ ಕಣ್ತಪ್ಪಿಸಿ ಬಿಲ್ ತಂದಿದ್ದಾರೆ. ಬಿಜೆಪಿ ನಿಲುವು ಸ್ಪಷ್ಟ ತುಘಲಕ್ ದರ್ಬಾರ್ ವಿರೋಧಿಸುತ್ತೇವೆ. ಸದನದ ಒಳಗೂ ಹೊರಗೂ ಪ್ರತಿಭಟನೆ ಮಾಡುತ್ತೇವೆ ಎಂದರು.

ಸಚಿವರೊಬ್ಬರಿಗೆ ಹನಿಟ್ರ್ಯಾಪ್ ಯತ್ನಿಸಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ಬಿವೈ ವಿಜಯೇಂದ್ರ, ಯಾರು ಹನಿಟ್ರ್ಯಾಪ್ ಮಾಡೋಕೆ ಹೋಗಿದ್ದಾರೆ ಅವರನ್ನೇ ಕೇಳಿ ಎಂದರು.

Key words: Muslim, reservation, bill, State Government, BY Vijayendra