ಅಹಿಂದ ವರ್ಗಗಳಿಗೆ ಶೇ 75ರಷ್ಟು ಮೀಸಲಾತಿ ಕೊಡಿ- ಸಚಿವ ಸಂತೋಷ್ ಲಾಡ್

ಬೆಂಗಳೂರು,ಮಾರ್ಚ್,19,2025 (www.justkannada.in): ಅಹಿಂದ ವರ್ಗಕ್ಕೆ ಶೇ 75ರಷ್ಟು ಮೀಸಲಾತಿ ಕೊಡಬೇಕು. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಬಳಿ ಮನವಿ ಮಾಡುತ್ತೇನೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದರು.

ಈ ಕುರಿತು ಮಾತನಾಡಿರುವ ಸಚಿವ ಸಂತೋಷ್ ಲಾಡ್, ತಮಿಳುನಾಡಿನಲ್ಲಿ 65 %ಮೀಸಲಾತಿ ಇದೆ. ಮೀಸಲಾತಿಗಾಗಿ ಸಿಎಂಗೆ ಬೇಡಿಕೆ ಸಲ್ಲಿಸಿದ್ದೇವೆ. ಎಲ್ಲಾ ವರ್ಗದವರಿಗೂ ಮೀಸಲಾತಿ ನೀಡಬೇಕು. ಶೋಷಿತ ವರ್ಗಗಳು, ಅಹಿಂದ ವರ್ಗಗಳು ಎಲ್ಲಾ ಹಿಂದುಳಿದ ವರ್ಗಗಳ ಅಭಿವೃದ್ಧಿಯಾಗಬೇಕು ಎಂದರು.

ಶೋಷಿತ ವರ್ಗಗಳು ಅಭಿವೃದ್ಧಿಯಾಗಬೇಕೆಂದರೆ ದೇಶದಲ್ಲಿ  75 ಶೇಕಡಾ ಮೀಸಲಾತಿ ಘೋಷಿಸಬೇಕು ಎಂದು ನಾನು ಮಾನ್ಯ ಮುಖ್ಯಮಂತ್ರಿಗಳಿಗೆ ಒತ್ತಾಯ ಮಾಡಿದ್ದೇನೆ. ಎಲ್ಲರೂ ಅಭಿವೃದ್ಧಿಯಾಗಬೇಕು. ತಮಿಳುನಾಡು 9 ನೇ ತಿದ್ದುಪಡಿ ಮಾಡಿಕೊಂಡು ಮೀಸಲಾತಿ ಹೆಚ್ಚಿಸಿದೆ. ನಮ್ಮಲ್ಲೂ ಅವಕಾಶ ಹೆಚ್ಚಾಗುತ್ತದೆ ಎಂಬ ಕಾರಣಕ್ಕೆ ಮೀಸಲಾತಿ ಹೆಚ್ಚಿಸಬೇಕು ಮನವಿ ಮಾಡಿರುವುದಾಗಿ ತಿಳಿಸಿದರು.

Key words: 75% reservation, Minister,  Santosh Lad