ಕೇಂದ್ರದಿಂದ ರಾಜ್ಯ ಸರ್ಕಾರದ ಪ್ರಸ್ತಾಪ ತಿರಸ್ಕಾರ: ಒಳ್ಳೆಯ ಸುದ್ದಿ ಎಂದ ಶಾಸಕ ಅಶ್ವಥ್ ನಾರಾಯಣ್

 

ಬೆಂಗಳೂರು,ಮಾರ್ಚ್,19,2025 (www.justkannada.in):  ರಾಮನಗರ ಜಿಲ್ಲೆಯನ್ನ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡುವ ರಾಜ್ಯ ಸರ್ಕಾರದ ಪ್ರಸ್ತಾಪವನ್ನ ಕೇಂದ್ರ ಸರ್ಕಾರ ತಿರಸ್ಕಾರ ಮಾಡಿದ್ದು ಒಳ್ಳೆಯ ಸುದ್ದಿ ಎಂದು ಬಿಜೆಪಿ ಶಾಸಕ ಅಶ್ವಥ್ ನಾರಾಯಣ್ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಅಶ್ವತ್ ನಾರಾಯಣ್, ರಾಜ್ಯ ಸರ್ಕಾರದ ಪ್ರಸ್ತಾಪವನ್ನ ಕೇಂದ್ರ  ಸರ್ಕಾರ ತಿರಸ್ಕಾರ ಮಾಡಿದ್ದು ಒಳ್ಳೆಯದೇ. ರಾಮನಗರ ಜಿಲ್ಲೆಯಾಗಿಯೇ ಉಳಿಯಬೇಕು. ರಿಯಲ್ ಎಸ್ಟೇಟ್ ಮಾಡುವ ಉದ್ದೇಶವಾಗಿತ್ತು. ಇದು ರಾಮನಗರ ಜಿಲ್ಲೆಗೆ ಮಾಡಿದ ಅಪಮಾನ ಎಂದು ಹೇಳಿದರು.

Key words: Centre,  rejection, state government,  proposal, MLA, Ashwath Narayan