ಹನಿಟ್ರ್ಯಾಪ್ ಕುರಿತು ಬಿಜೆಪಿ ಆರೋಪ: ಡಿಸಿಎಂ ಡಿಕೆಶಿ ಪರ ಬ್ಯಾಟ್ ಬೀಸಿದ ಯತೀಂದ್ರ ಸಿದ್ದರಾಮಯ್ಯ

ಮೈಸೂರು,ಮಾರ್ಚ್,26,2025 (www.justkannada.in): ಹನಿ ಟ್ರ್ಯಾಪ್ ಹಿಂದೆ ಡಿಕೆ ಶಿವಕುಮಾರ್ ಕೈವಾಡವಿದೆ ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿರುವ ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ, ಇದರ ಹಿಂದೆ ಡಿಕೆ ಶಿವಕುಮಾರ್ ಇಲ್ಲ  ಎಂದು ಹೇಳಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ,  ಈ ಹಿಂದೆ ಬಿಜೆಪಿಯ 17 ಜನ ಕೋರ್ಟ್ ನಿಂದ ಇಂಜೆಕ್ಷನ್ ತಂದಿದ್ದರು. ಹಾಗಾದರೆ ಅವರ ವಿಡಿಯೋ ಬಿಜೆಪಿ ಅವರೇ ಮಾಡಿಸಿದ್ದ? ಬಿಜೆಪಿ ಅವರಿಗೆ ಕಾಂಗ್ರೆಸ್ ಪಕ್ಷದ ಯಾವುದೇ ನಾಯಕರ ವಿರುದ್ಧ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಕಿಡಿಕಾರಿದರು.

ದೂರು ನೀಡಲು ಸಚಿವ ಕೆ.ಎನ್ ರಾಜಣ್ಣ ವಿಳಂಬ ವಿಚಾರ ಕುರಿತು ಪ್ರತಿಕ್ರಿಯಿಸಿದ ಯತೀಂದರ ಸಿದ್ದರಾಮಯ್ಯ, ಅದನ್ನು ರಾಜಣ್ಣ ಅವರನ್ನೇ ಕೇಳಬೇಕು. ಅವರು ಏನು ಮಾಡಿದರೆ ಒಳ್ಳೆಯದು ಅಂತ ಚರ್ಚೆ ಮಾಡುತ್ತಿದ್ದಾರೆ ಅನ್ನಿಸುತ್ತೆ. ಗೃಹ ಸಚಿವರ ಜೊತೆ ಮಾತುಕತೆ ನಡೆಸಿದ್ದಾರೆ ಎಂದರು.

ಸಚಿವ ರಾಜಣ್ಣ ಮನೆಯಲ್ಲಿ ಸಿಸಿ ಟಿವಿ ಇಲ್ಲದ ವಿಚಾರ, ಆ ಬಗ್ಗೆ ನನಗೆ ಗೊತ್ತಿಲ್ಲ. ಸಿಎಂ ಮನೆಯಲ್ಲಿ ಸಿಸಿ ಟಿವಿ ಇದೆ. ಸಚಿವರ ಮನೆಯಲ್ಲಿ ಸಿಸಿ ಟಿವಿ ಇದಿಯಾ ಇಲ್ವಾ ಗೊತ್ತಿಲ್ಲ. ಸಿಸಿಟಿವಿ ಇದ್ದರೆ ಒಳ್ಳೆಯದು. ಇಲ್ಲಿ ರಾಜಣ್ಣ ಕೂಡ ಟಾರ್ಗೆಟ್ ಆಗಿಲ್ಲ. ಯಾರು ಯಾರನ್ನು ಟಾರ್ಗೆಟ್ ಮಾಡೋಕೆ ಆಗಲ್ಲ. ರಾಜಣ್ಣ ಅವರಿಗೆ ಆದ ಅನುಭವ ಸದನದಲ್ಲಿ ಹೇಳಿದ್ದಾರೆ ಅಷ್ಟೇ. ತನಿಖೆ ಆಗತ್ತೆ ಮುಂದೆ ಸತ್ಯ ಹೊರಬರಲಿದೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದರು.

Key words: BJP, honey trap, Yathindra Siddaramaiah, DCM DK Shivakumar