ವಿಜಯೇಂದ್ರರನ್ನ ಟೀಕಿಸಿದ್ರೆ ನಾನು ಒಳ್ಳೆಯವನಾ..? ಶೋಕಾಸ್ ನೋಟಿಸ್ ಗೆ ಎಂ.ಪಿ ರೇಣುಕಾಚಾರ್ಯ ಅಸಮಾಧಾನ

ಬೆಂಗಳೂರು,ಮಾರ್ಚ್,26,2025 (www.justkannada.in): ಕೇಂದ್ರ ಬಿಜೆಪಿ ಶಿಸ್ತು ಸಮಿತಿ ತಮಗೆ ಶೋಕಾಸ್ ನೋಟಿಸ್ ನೀಡಿರುವುದಕ್ಕೆ ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಎಂ.ಪಿ ರೇಣುಕಾಚಾರ್ಯ,  ವಿಜಯೇಂದ್ರರನ್ನ ಟೀಕೆ ಮಾಡಿದ್ರೆ ನಾನು ಒಳ್ಳೆಯವನಾ..? ಬಿಜೆಪಿ ರಾಜ್ಯಾಧ್ಯಕ್ಷರನ್ನ ಟೀಕಿಸಿದರೇ ರೇಣುಕಾಚಾರ್ಯ ಒಳ್ಳೆಯವನಾ..? ಬಿಎಸ್ ವೈ ಟೀಕಿಸಿದವರನ್ನ  ಉಚ್ಚಾಟನೆ ಮಾಡಲಿಲ್ಲ. ಪಕ್ಷವನ್ನ ಸಮರ್ಥನೆ ಮಾಡಿಕೊಳ್ಳುವುದು ಅಪರಾಧನಾ..? ಶೋಕಾಸ್ ನೋಟಿಸ್ ಗೆ ದಾಖಲೆ ಸಮೇತ ಉತ್ತರ ನೀಡುತ್ತೇನೆ ಎಂದರು.

ಹೈಕಮಾಂಡ್ ಗೆ ತಪ್ಪು ಸಂದೇಶ ನೀಡಿದ್ದಾರೆ.  ನನಗೆ ನೋಟಿಸ್ ನೀಡಿದ್ದಕ್ಕೆ ಭಯವಿಲ್ಲ ನಾನು ಹೆದರಲ್ಲ. ಬಿಜೆಪಿಯಲ್ಲಿ ಆಗಿರುವ ಗೊಂದಲ ಪಕ್ಷ ವಿರೋಧಿ ಚಟುವಟಿಕೆ ಕುರಿತು ಎಲ್ಲದಕ್ಕೂ ಉತ್ತರ ನೀಡುತ್ತೇನೆ. ನಾನು ಎರಡು ಬಾರಿ ಜೈಲಿಗೆ ಹೋಗಿ ಬಂದಿದ್ದೇನೆ.  ಪಕ್ಷ ಸಂಘಟನೆ ಮಾಡಿದ್ದೇನೆ. ನನ್ನಂಥವರಿಗೆ ನೋಟಿಸ್ ನೀಡಿದ್ದಾರಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

Key words:  BJP, showcase notice, MP Renukacharya