ಮೈಸೂರು, ಮಾ.26, 2025 : ಬಿಜೆಪಿ ಹಿರಿಯ ಮುಖಂಡ ಬಸವನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಬಿಜೆಪಿ ಹೈಕಮಾಂಡ್ ಉಚ್ಛಾಟನೆ ಮಾಡಿದೆ. ಅನಗತ್ಯವಾಗಿ ಪಕ್ಷದ ಮುಖಂಡ, ಪ್ರಮುಖವಾಗಿ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಅವರ ಪುತ್ರ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಸಾಲುಸಾಲು ಟೀಕೆಗಳನ್ನು ಮಾಡುತ್ತಿದ್ದ ಯತ್ನಾಳ್ ಅಂಡ್ ಟೀಮ್ ಗೆ ಈಗ ನಡುಕ ಶುರುವಾಗಿದೆ.
“ ಹಿಂದು ಹುಲಿ” ಎಂದೇ ಹಿಂಬಾಲಕರಿಂದ ಬಿಂಬಿಸಿಕೊಂಡಿದ್ದ ಹಿರಿಯ ರಾಜಕಾರಣಿ ಯತ್ನಾಳ್ ರನ್ನೇ ಪಕ್ಷದ ಮುಖಂಡರು ಕ್ಯಾರೆ ಎನ್ನದಿರುವುದು ಈಗ ಉಳಿದ ಬಂಡಾಯಗಾರರಲ್ಲಿ ಆತಂಕಕ್ಕೆ ಕಾರಣವಾಗಿದೆ. ಈಗ ಈ ಬಂಡಾಯಗಾರರ ಮುಂದಿನ ನಡೆ ಏನು ಎಂಬ ಪ್ರಶ್ನೆ ಉದ್ಭವಿಸಿದೆ.
ಸೇಫ್ ಜೋನ್ ನಲ್ಲಿ ಮಾಜಿ ಎಂಪಿ:
ಬಣಗಳ ನಡುವೆ ಅಂತರ ಕಾಯ್ದುಕೊಂಡು ರಾಜಕೀಯದ ಆಯಸ್ಸು ಹೆಚ್ಚಿಸಿಕೊಂಡ್ರಾ ಮಾಜಿ ಎಂಪಿ. ಮೈಸೂರು ಭಾಗದಲ್ಲಿ ರೆಬೆಲ್ ಆಗಿದ್ದ ನಾಯಕ. ಆರಂಭದಲ್ಲಿ ಯತ್ನಾಳ್ ಬಣದಲ್ಲಿ ಕಾಣಿಸಿಕೊಂಡಿದ್ದ ಮಾಜಿ ಸಂಸದ ಪ್ರತಾಪಸಿಂಹ ಕಳೆದ ಕೆಲವು ದಿನಗಳ ಹಿಂದೆ ವಿಜಯೇಂದ್ರ ಭೇಟಿ. ಮೈಸೂರಲ್ಲಿ ಪ್ರತಿಭಟನೆಗೆ ಆಗಮಿಸಿದ್ದ ವೇಳೆ ವಿಜಯೇಂದ್ರ ಭೇಟಿಯಾಗಿ ಮುನಿಸು ಮರೆತಿದ್ದರ ಪರಿಣಾಮ ಬಚಾವ್ ಆದ ಮಾಜಿ ಸಂಸದ.
ಕೊನೆ ಕ್ಷಣದಲ್ಲಿ ಯತ್ನಾಳದ ಕ್ಯಾಂಪಿಂದ ವಿಜಯೇಂದ್ರ ಜೊತೆ ಕಾಣಿಸಿಕೊಂಡು ಸೇಫ್ ಜೋನ್ ನಲ್ಲಿ. ಈ ಕಾರಣಕ್ಕೆ ಶೋಕಾಸ್ ನೋಟಿಸ್ ನಿಂದಲೂ ದೂರ. ಪಕ್ಷದ ಉಚ್ಛಾಟನೆಯಿಂದಲೂ ಸೇಫ್ ಎನ್ನಲಾಗಿದೆ.
ಎಂಪಿ ಟಿಕೆಟ್ ತಪ್ಪಿದ್ದಕ್ಕೆ ಅಸಮಾಧಾನ ಹೊರಹಾಕುತ್ತಿದ್ದ ಮಾಜಿ ಸಂಸದ. ಇದೇ ಕಾರಣಕ್ಕಾಗಿ ಮೈಸೂರು ಭಾಗದ ಹೋರಾಟ, ಸುದ್ದಿಗೋಷ್ಠಿಗಳು, ಪ್ರತಿಭಟನೆ, ನಾಯಕರ ಭೇಟಿ ವೇಳೆ ಏಕಾಂಗಿ. ಪ್ರತ್ಯೇಕ ಹೋರಾಟಗಳ ಮೂಲಕ ಮೈಸೂರು ಭಾಗದ ನಾಯಕರಿಂದ ಅಂತರ.
KEY WORDS: former MP, prathap simha, disciplinary action, mysore
former MP prathap simha escaped from party disciplinary action