ಮೈಸೂರಲ್ಲಿ ಯಶಸ್ವಿಯಾಗಿ ಜರುಗಿದ ABVP ವಿದ್ಯಾರ್ಥಿನಿಯರ ಸಮ್ಮೇಳನ.

mysore ABVP womens wing 

ಮೈಸೂರು, ಮಾ.26, 2025: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೈಸೂರು ವಿಭಾಗದ ವತಿಯಿಂದ  ಬಾಲಿಕಾ ಛಾತ್ರ ಪಾರ್ವಮ್ ಎಂಬ ವಿಭಾಗ ವಿದ್ಯಾರ್ಥಿನಿಯರ ಸಮ್ಮೇಳನ ಮಹಾರಾಜಾ ಶತಮಾನೋತ್ಸವ ಭವನದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ  ಮೈಸೂರು , ಟಿ ನರಸೀಪುರ, ಹುಣಸೂರು, ಚಾಮರಾಜನಗರ, ಪಿರಿಯಾಪಟ್ಟಣ, ಕೆ.ಆರ್ ನಗರದಿಂದ ಸುಮಾರು 500 ಕ್ಕೂ ಹೆಚ್ಚು ವಿದ್ಯಾರ್ಥಿನಿರು ಆಗಮಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಾಧನ ತಂತ್ರಿ, ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ರಾಷ್ಟ್ರೀಯತೆಯನ್ನು ಕುರಿತು ” ಭಾರತೀಯರಿಗೆ ಗುರುತು ಅಂತ ಹೇಳಿದ್ರೆ ಅದು ರಾಷ್ಟ್ರೀಯತೆ, ಭಾರತದ ಭವ್ಯ ಪರಂಪರೆ,ಭಾರತ ಬೆಳೆದು ಬಂದ ಹಾದಿ, ಭಾರತದ ಸಂಪೂರ್ಣ ಇತಿಹಾಸ ” ಎಂಬುದಾಗಿ ವಿದ್ಯಾರ್ಥಿನಿಯರಿಗೆ ಮಾಹಿತಿ ತಿಳಿಸಿದರು.

ಮುಖ್ಯ ವಕ್ತರರಾಗಿ ಆಗಮಿಸಿದ್ದ  ಪ್ರೊ. ರಾಜಲಕ್ಷ್ಮಿ ,  ರಾಷ್ಟ್ರದ ಪುನರ್ ನಿರ್ಮಾಣದಲ್ಲಿ ವಿದ್ಯಾರ್ಥಿನಿಯರ ಪಾತ್ರ ಮತ್ತು ಮಹಿಳಾ ಸಬಲೀಕರಣ ಎಂಬ ವಿಷಯದ ಕುರಿತು ಮಾತನಾಡಿದರು.

ಖೋ -ಖೋ ವಿಶ್ವಕಪ್ನಲ್ಲಿ ಗೆದ್ದು ಅತ್ಯುತ್ತಮ ಆಟಗಾರ್ತಿಯೆಂದು ಪ್ರಶಂಸೆಗೆ ಪಾತ್ರರಾಗಿದ್ದ ಸಾಂಸ್ಕೃತಿಕಾ ನಗರಿ ಮೈಸೂರು ಜಿಲ್ಲೆಯ ತಿರುಮಕೂಡಲು ನರಸೀಪುರ ತಾಲೂಕಿನ ಕುರಬೂರು ಗ್ರಾಮದ ಕುಮಾರಿ. ಚೈತ್ರ ಬಿ ರವರಿಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಸನ್ಮಾನಿಸಿ ಹಾರೈಸಲಾಯಿತು.

ಕಾರ್ಯಕ್ರಮ ಮುಗಿದ ನಂತರ ನಗರದ ಪ್ರಮುಖ ರಸ್ತೆಗಳಾದ ರಾಮಸ್ವಾಮಿ ವೃತ್ತ ಮತ್ತು ಚಾಮರಾಜ ಜೋಡಿ ರಸ್ತೆಯಲ್ಲಿ ಶೋಭಯಾತ್ರೆಯನ್ನು ಯಶಸ್ವಿಯಾಗಿ ನಡೆಸಲಾಯಿತು.

ಈ ಕಾರ್ಯಕ್ರಮಕ್ಕೆ ಪ್ರಾಂತ ವಿದ್ಯಾರ್ಥಿನಿ ಪ್ರಮುಖೆ ಸುಧಾ ಶಣೈ, ವಿಭಾಗ ವಿದ್ಯಾರ್ಥಿನಿ ಪ್ರಮುಖೆ ವಸಂತ, ಪ್ರಾಂತ ಕಾರ್ಯಸಮಿತಿ ಸದಸ್ಯೆ ದೀಪಿಕಾ ಡಿ. ಎ, ಪ್ರಾಂತ ಕಾರ್ಯಕಾರಣಿ ಸದಸ್ಯೆ ಇಂಚರ, ಎಬಿವಿಪಿ ಯ ಹಿರಿಯ ಕಾರ್ಯಕರ್ತರು ಮತ್ತು ಮೈಸೂರು ಮಹಾನಗರದ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.

KEY WORDS: mysore, ABVP, womens wing

mysore ABVP womens wing