ಯತ್ನಾಳ್ ಉಚ್ಚಾಟನೆ ಬೇರೆಯವರಿಗೆ ಎಚ್ಚರಿಕೆ  ಗಂಟೆ- ಛಲವಾದಿ ನಾರಾಯಣಸ್ವಾಮಿ

ಮೈಸೂರು,ಮಾರ್ಚ್,28,2025 (www.justkannada.in): ಬಿಜೆಪಿ ಪಕ್ಷದಿಂದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆ ಮಾಡಿರುವುದು ಬೇರೆಯವರಿಗೆ ಎಚ್ಚರಿಕೆ ಗಂಟೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ಕಾರ್ಯಕರ್ತರ ಪಕ್ಷ. ಇಲ್ಲಿ ಹುಲಿ ಯಾರು ಇಲ್ಲ.  ಹುಲಿ ಎಂದೆರೆ ಕಾಡಿಗೆ ಕಳುಹಿಸುತ್ತಾರೆ. ಮೈಕ್ ಮುಂದೆ ನಿಂತರೆ ಎಲ್ಲವನ್ನೂ ಮಾತನಾಡುತ್ತಾರೆ. ಯತ್ನಾಳ್ ನನಗೆ ಆತ್ಮೀಯರು.

ಶಾಸಕ ಯತ್ನಾಳ್ ಗೆ  ತಪ್ಪು ತಿದ್ದಿಕೊಳ್ಳಲು ಅವಕಾಶ ನೀಡಿದ್ದರು. ಇದು ಬೇರೆಯವರಿಗೆ ಎಚ್ಚರಿಕೆ ಗಂಟೆ.  ಯಾರೂ ಹೈಕಮಾಂಡ್ ನಿರ್ಧಾರ ವಿರೋಧಿಸಬಾರದು. ಯತ್ನಾಳ್ ಪರ ನಾವಿದ್ದೇವೆ ಎಂದು ಹೇಳಬಾರದು.  ಹೊಂದಾಣಿಕೆ ರಾಜಕಾರಣಕ್ಕೆ ಹೈಕಮಾಂಡ್ ಬ್ರೇಕ್ ಹಾಕಲಿದೆ ಎಂದು ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.

Key words: Yatnal, expulsion, warning bell, Chalavadi Narayanaswamy