ಲಾಂಗ್ ಹಿಡಿದು ರೀಲ್ಸ್ ಪ್ರಕರಣ: ಬಿಗ್ ಬಾಸ್ ಮಾಜಿ ಸ್ಪರ್ಧಿಗಳಿಗೆ ಷರತ್ತುಬದ್ಧ ಜಾಮೀನು

ಬೆಂಗಳೂರು,ಮಾರ್ಚ್,28,2025 (www.justkannada.in): ಲಾಂಗ್ ಹಿಡಿದು ರೀಲ್ಸ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾದ ರಜತ್ ಮತ್ತು ವಿನಯ್ ಗೌಡಗೆ 24ನೇ ಎಸಿಎಂಎಂ ಕೋರ್ಟ್  ಷರತ್ತು ಬದ್ಧ ಜಾಮೀನು ಮಾಡಿದೆ.

ರಜತ್ ಮತ್ತು ವಿನಯ್ ಗೌಡ ಲಾಂಗ್ ಹಿಡಿದು ಮಾಡಿದ್ದ ರೀಲ್ಸ್  ವೈರಲ್ ಆಗಿತ್ತು. ಈ ಸಂಬಂಧ ಬಸವೇಶ್ವರನಗರ ಠಾಣಾ ಪೊಲೀಸರು ನೋಟಿಸ್ ನೀಡಿದ್ದರು. ವಿಚಾರಣೆಗೆ ಹಾಜರಾಗಿದ್ದ ವೇಳೆ ಇಬ್ಬರನ್ನು ಪೊಲೀಸರು ಬಂಧಿಸಿ ಕೋರ್ಟ್ ಗೆ ಹಾಜರುಪಡಿಸಿದ್ದರು. ನಂತರ ಕೋರ್ಟ್ ಪೊಲೀಸರ ಕಸ್ಟಡಿಗೆ ನೀಡಿತ್ತು.

ಈ ಮಧ್ಯೆ ಜಾಮೀನು ಕೋರಿ ಇಬ್ಬರು ಅರ್ಜಿ ಸಲ್ಲಿಸಿದ್ದರು. ಇದೀಗ ರಜತ್ ಮತ್ತು ವಿನಯ್ ಗೌಡ ಇಬ್ಬರಿಗೂ 24ನೇ ಎಸಿಎಂಎಂ ಕೋರ್ಟ್ ಷರತ್ತು ಬದ್ದ ಜಾಮೀನು ಮಂಜೂರು ಮಾಡಿದೆ. ತಲಾ 20 ಸಾವಿರ ರೂ. ಶ್ಯೂರಿಟಿ ಸಲ್ಲಿಸುವಂತೆ ಕೋರ್ಟ್ ಸೂಚನೆ ನೀಡಿದೆ.

Key words: Long Reels case,  Conditional bail, former Bigg Boss, contestants