ಹಾಲಿನ ದರ ಏರಿಕೆ ಹಣ ಸರ್ಕಾರಕ್ಕೆ ಅಲ್ಲ, ರೈತರಿಗೆ ಹೋಗುತ್ತೆ- ಡಿಸಿಎಂ ಡಿಕೆ ಶಿವಕುಮಾರ್

ನವದೆಹಲಿ,ಮಾರ್ಚ್,28,2025 (www.justkannada.in): ಏರಿಕೆ ಮಾಡಲಾಗಿರುವ 4 ರೂ. ಹಾಲಿನ ದರ ಸರ್ಕಾರಕ್ಕೆ ಬರುವುದಿಲ್ಲ. ಅದು ರೈತರಿಗೆ ಹೋಗುತ್ತದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.

ನಂದಿನಿ ಹಾಲಿನ ದರ ಏರಿಕೆ ಬೆನ್ನಲ್ಲೆ ರಾಜ್ಯ ಸರ್ಕಾರದ ವಿರುದ್ದ  ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಹೆಚ್ ಡಿ ಕುಮಾರಸ್ವಾಮಿ ಅವರಿಗೆ  ಮೊದಲು ಜಿಎಸ್​ಟಿ ಮೇವಿನ ಬೆಲೆ ಇಳಿಕೆ ಮಾಡಲು ಹೇಳಿ.  ಪೆಟ್ರೋಲ್ ಡೀಸೆಲ್ ಇದರ ಇಳಿಕೆ ಮಾಡಲು ಹೇಳಿ.  ಬೆಲೆ ಏರಿಕೆ ಹಣ ಸರ್ಕಾರಕ್ಕೆ ಬರಲ್ಲ ರೈತರಿಗೆ ಹೋಗುತ್ತದೆ. ಕುಮಾರಸ್ವಾಮಿ ಏನಾದರೂ ಹೇಳಲಿ ರೈತರು ಬದುಕಬೇಕಲ್ವಾ? ಹಾಲಿನ ಸಹಕಾರ ವ್ಯವಸ್ಥೆ ಬಗ್ಗೆ ಅವರ ಅಣ್ಣನ ಬಳಿ ಕೇಳಲು ಹೇಳಿ ಎಂದು ಟಾಂಗ್ ಕೊಟ್ಟರು.

ಸಚಿವ ಕೆ.ಎನ್ ರಾಜಣ್ಣ ಪುತ್ರ ರಾಜೇಂದ್ರ ಅವರ ಹತ್ಯೆಗೆ ಯತ್ನ ಆರೋಪ ಕುರಿತು ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಈ ಬಗ್ಗೆ ನನಗೆ ಗೊತ್ತಿಲ್ಲ. ಗೃಹ ಸಚಿವರು ಈ ಕುರಿತು ತನಿಖೆ ಮಾಡಿಸುತ್ತಾರೆ ಎಂದರು.

Key words: milk price hike, Money, farmers, DCM, DK Shivakumar