ಚಿಕ್ಕಮಗಳೂರು, ಏಪ್ರಿಲ್,2,2025 (www.justkannada.in): ಪತಿಯೊಬ್ಬ ಬಿಟ್ಟುಹೋದ ಹೆಂಡತಿಯ ಮೇಲಿನ ಸಿಟ್ಟಿಗೆ ಮೂವರನ್ನು ಹತ್ಯೆ ಮಾಡಿ ಬಳಿಕ ತಾನು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಚಿಕ್ಕಮಗಳೂರು ತಾಲೂಕಿನ ಮಾಗಲು ಗ್ರಾಮದಲ್ಲಿ ಘಟನೆ. ರತ್ನಾಕರ್ ಎಂಬಾತನೇ ತನ್ನ ಮಗಳು ಮೌಲ್ಯ (7) , ಅತ್ತೆ ಜ್ಯೋತಿ(50), ನಾದಿನಿ ಸಿಂಧು(36) ಮೂವರನ್ನ ನಾಡ ಬಂದೂಕಿನಿಂದ ಗುಂಡು ಹಾರಿಸಿ ಹತ್ಯೆ ಮಾಡಿ ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ನಾಲ್ಕು ಮೃತ ದೇಹಗಳನ್ನು ಆಸ್ಪತ್ರೆ ರವಾನೆ ಮಾಡಲಾಗಿದೆ.
ಹತ್ಯೆಗೂ ಮುನ್ನ ರತ್ನಾಕರ್ ಸೆಲ್ಫಿ ವಿಡಿಯೋ ಮಾಡಿ ವಾಟ್ಸಪ್ ನಲ್ಲಿ ಅಪ್ಲೋಡ್ ಮಾಡಿದ್ದನು. ಎರಡು ವರ್ಷಗಳ ಹಿಂದೆ ರತ್ನಾಕರ್ ನಿಂದ ಪತ್ನಿ ದೂರವಾಗಿದ್ದಳು. ಮಗಳನ್ನು ಬಿಟ್ಟು ಪತ್ನಿ ಬೆಂಗಳೂರು ಸೇರಿದ್ದಳು. ಈ ನಡುವೆ ಹೊಸತೊಡಕು ಹಬ್ಬದ ಹಿನ್ನೆಲೆ ಅತ್ತೆ ಜ್ಯೋತಿ ಶಾಲೆಯಿಂದ ಮೊಮ್ಮಗಳನ್ನ ಮನೆಗೆ ಕರೆದೊಯ್ದಿದ್ದರು.
ಈ ವೇಳೆ ರತ್ನಾಕರ್ ಏಕಾಏಕಿ ಮನೆಗೆ ನುಗ್ಗಿ ಮೂವರ ಮೇಲೆ ಗುಂಡು ಹಾರಿಸಿದ್ದಾನೆ. ಹತ್ಯೆ ನಡೆದ ಮನೆಯ ಹಿಂಭಾಗದ ಕಾಫಿತೋಟದಲ್ಲಿ ಗುಂಡು ಹಾರಿಸಿಕೊಂಡು ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಕುರಿತು ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Key words: Chikkamagalur, firing, kills, three member, commits suicide