ಮೈಸೂರು ಪಾಲಿಕೆ ನೌಕರರ ಸಹಕಾರ ಸಂಘದ ಅಧ್ಯಕ್ಷರಾಗಿ ಎಸ್.ಯಶೋಧರ, ಉಪಾಧ್ಯಕ್ಷರಾಗಿ ಕೆ.ಸುಮಂಗಳ ಆಯ್ಕೆ

ಮೈಸೂರು,ಏಪ್ರಿಲ್,2,2025 (www.justkannada.in): ಮೈಸೂರು ಮಹಾ ನಗರಪಾಲಿಕೆಯ ನೌಕರರ ಸಹಕಾರ ಸಂಘಕ್ಕೆ ಅಧ್ಯಕ್ಷ, ಉಪಾಧ್ಯಕ್ಷ, ಹಾಗೂ ಖಜಾಂಚಿ ಸ್ಥಾನಗಳಿಗೆ ಇಂದು ಚುನಾವಣೆ ನಡೆಸಲಾಯಿತು.

ಅಧ್ಯಕ್ಷರಾಗಿ ಎಸ್.ಯಶೋಧರ, ಉಪಾಧ್ಯಕ್ಷರಾಗಿ ಕೆ.ಸುಮಂಗಳ ರವರು ಹಾಗೂ ಖಜಾಂಚಿಯಾಗಿ ನಸ್ರುಲ್ಲಾ  ಅವರು ಅವಿರೋಧವಾಗಿ ಆಯ್ಕೆಯಾದರು. ಇದೇ ಸಂದರ್ಭದಲ್ಲಿ ಸಹಕಾರ ಸಂಘದ ಒಳಿತಿಗಾಗಿ  ಹಿರಿಯ ಸದಸ್ಯರ ಮಾರ್ಗದರ್ಶನದಲ್ಲಿ ಜವಾಬ್ದಾರಿ ನಿರ್ವಹಿಸಲು ಶ್ರಮಿಸುತ್ತಿವೆ ಎಂದು ತಿಳಿಸಿದರು.

ಈ ವೇಳೆ ಸದಸ್ಯರುಗಳಾದ ಬಿ.ಪ್ರಸಾದ್, ಎಚ್. ಎಂ.ಶಿವಪ್ರಸಾದ್, ಕೆ ವಿಶ್ವನಾಥ್, ಎನ್. ಮಂಜುನಾಥ್. ಬಿ.ರಾಜು, ಎಸ್ ಮೈತ್ರಿ, ವಿ. ರಾಜೇಶ್ವರಿ ಬಾಯಿ,  ಎಂ .ಬಸವಣ್ಣ, ಡಿ .ಸುರೇಂದ್ರ ಕುಮಾರ್ ಮತ್ತು ಸಹಕಾರ ಸಂಘದ ಕಾರ್ಯದರ್ಶಿ ಎನ್ ಶಿವಕುಮಾರ್ ಉಪಸ್ಥಿತರಿದ್ದರು.

Key words: Mysore City Corporation, Co -operative Society, election