ಹೈಕಮಾಂಡ್ ಹೇಳಿದರೇ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬಿಡಲು ಡಿ.ಕೆ ಶಿವಕುಮಾರ್ ಸಿದ್ದ- ಶಾಸಕ ಬಾಲಕೃಷ್ಣ

 ರಾಮನಗರ,ಏಪ್ರಿಲ್,5,2025 (www.justkannada.in): ಹೈಕಮಾಂಡ್ ಹೇಳಿದರೇ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬಿಡಲು ಡಿ.ಕೆ  ಶಿವಕುಮಾರ್ ಸಿದ್ದರಿದ್ದಾರೆ ಎಂದು ಕಾಂಗ್ರೆಸ್  ಶಾಸಕ ಬಾಲಕೃಷ್ಣ ತಿಳಿಸಿದರು.

ರಾಮನಗರ ತಾಲೂಕಿನ ಲಕ್ಷ್ಮಿಪುರದಲ್ಲಿ ಮಾತನಾಡಿದ ಕಾಂಗ್ರೆಸ್ ಶಾಸಕ ಹೆಚ್ ಸಿ ಬಾಲಕೃಷ್ಣ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ಬಗ್ಗೆ ಹೈಕಮಾಂಡ್ ತೀರ್ಮಾನಿಸುತ್ತದೆ. ಅಧ್ಯಕ್ಷ ಸ್ಥಾನಕ್ಕೆ ಹೈಕಮಾಂಡ್ ಸೂಕ್ತ ವ್ಯಕ್ತಿಯನ್ನು ಗುರುತಿಸಿದರೆ ಸ್ವಾಗತ ಮಾಡುತ್ತೇವೆ ಎಂದರು.

ಯಾವುದೇ ಕಂಡೀಶನ್ ಹಾಕಿ ಅಧ್ಯಕ್ಷ ಸ್ಥಾನ ಬಿಡುತ್ತಾರೆ ಅನ್ನೋದು ಸುಳ್ಳು. ಹೈಕಮಾಂಡ್ ಅವರು ಹೇಳಿದರೆ  ಡಿಸಿಎಂ ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬಿಡಲು ಸಿದ್ದರಿದ್ದಾರೆ ಎಂದು ಹೇಳಿದರು.

Key words: DK Shivakumar, KPCC president, MLA, Balakrishna