ಬೆಳಗಾವಿ,ಏಪ್ರಿಲ್,7,2025 (www.justkannada.in): ಬಿಜೆಪಿ ಪಕ್ಷದಿಂದ ಉಚ್ಚಾಟನೆಗೊಂಡರೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ , ಬಿವೈ ವಿಜಯೇಂದ್ರ ವಿರುದ್ದ ಮತ್ತೆ ವಾಗ್ದಾಳಿ ಮುಂದುವರೆಸಿದ್ದಾರೆ.
ಇಂದು ಬೆಳಗಾವಿಯ ಬೈಲಹೊಂಗಲದಲ್ಲಿ ಮಾತನಾಡಿರುವ ಶಾಸಕ ಯತ್ನಾಳ್, ಬಿಎಸ್ ಯಡಿಯೂರಪ್ಪ ಫೋಟೊ ಹಾಕಿದ್ರೆ ವೋಟ್ ಹಾಕುವ ಕಾಲ ಹೋಯ್ತು. ಬಿಎಸ್ ವೈ ಫೋಟೊ ಹಾಕಿದ್ರೆ ವೋಟ್ ಹಾಕಲ್ಲ ಎಂದು ಲೇವಡಿ ಮಾಡಿದರು.
ನಾನು ಪಕ್ಷ ಕಟ್ಟಿದ್ರೆ ಕಾಂಗ್ರೆಸ್ ಗೆ ಅನುಕೂಲ ಆಗುತ್ತದೆ. ಹೀಗಾಗಿ ಯೋಚನೆ ಮಾಡುತ್ತಿದ್ದೇವೆ. ಬಹಳಷ್ಟು ಜನರು ಆರ್ಥಿಕವಾಗಿ ಬೆಂಬಲ ಕೊಡ್ತೀವಿ ಎಂದಿದ್ದಾರೆ. ಇಡೀ ರಾಜ್ಯದ ಎಲ್ಲಾ ಕಡೆಯಿಂದ ಬೆಂಬಲ ಸಿಗುತ್ತಿದೆ. ಪಕ್ಷ ಕಟ್ಟಿದ ಮೇಲೆ ಕಾಂಗ್ರೆಸ್ ಹಣ ಪಡೆದು ಕಟ್ಟಿದ್ದಾನೆ ಅಂತಾರೆ. ಬಿಜೆಪಿ ಪಕ್ಷ ಕಟ್ಟಿವರು ಕೂಡ ನಾವೇ. ಛಲವಾದಿ ನಾರಾಯಣಸ್ವಾಮಿ ಪಕ್ಷ ಕಟ್ಟಿದ್ರಾ..? ವಿಜಯೇಂದ್ರ ಭಾಷಣ ನಾವು ಕೇಳಬೇಕು ಎಂತಹ ದುರ್ದೈವ. ಪ್ರೀತಂಗೌಡ ಯಾವಾಗ ಕಾಂಗ್ರೆಸ್ ಹೋಗುತ್ತಾರೋ ಗೊತ್ತಿಲ್ಲ ಹೈಕಮಾಂಡ್ ಗೆ ತಲೆಬಾಗಿದ್ದೇವೆ ಅನ್ನದು ಕಾಮನ್ ಡೈಲಾಗ್. ಆದರೆ ಬಿಜೆಪಿಯಲ್ಲಿ ಟಿಕೆಟ್ ಸಿಗದಿದ್ದರೇ ಬೇರೆ ಪಕ್ಷಕ್ಕೆ ಹೋಗ್ತಾರೆ ಎಂದು ಹೇಳಿದರು.
Key words: BSY, photo, vote, MLA, Basanagouda Patil Yatnal