ವಿದ್ಯಾರ್ಥಿನಿ ಮನೆ ನುಗ್ಗಿ ಅತ್ಯಾಚಾರ : ಅತಿಥಿ ಶಿಕ್ಷಕನ ಬಂಧನ

ಕಲಬುರಗಿ ,ಏಪ್ರಿಲ್,7,2025 (www.justkannada.in):  ವಿದ್ಯಾರ್ಥಿನಿ ಮನೆಗೆ ನುಗ್ಗಿ ಅತ್ಯಾಚಾರವೆಸಗಿದ ಆರೋಪದ ಮೇಲೆ ಅತಿಥಿ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ.

ಕಲ್ಬುರ್ಗಿ ಜಿಲ್ಲೆ ಅಳಂದ ತಾಲ್ಲೂಕಿನ ಮಾದನಹಿಪ್ಪರಗಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಶಿವರಾಜ ಎಂಬಾತನೇ ಅತ್ಯಾಚಾರವೆಸಗಿದ ಅತಿಥಿ ಶಿಕ್ಷಕ . ಮಾದನಹಿಪ್ಪರಗಾ ಠಾಣೆ ಪೊಲೀಸರು ಶಿವರಾಜುನನ್ನು ಬಂಧಿಸಿದ್ದಾರೆ.

ಕಳೆದ ಐದು ದಿನಗಳ ಹಿಂದೆ ಅತಿಥಿ ಶಿಕ್ಷಕ ಶಿವರಾಜ್ 8ನೇ ತರಗತಿ ವಿದ್ಯಾರ್ಥಿನಿ ಮನೆಗೆ ನುಗ್ಗಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂಬ ಆರೋಪ ಕೇಳಿ ಬಂದಿದ್ದು ನಿನ್ನೆ ಆತನನ್ನು ಪೊಲೀಸರು ಬಂಧಿಸಿದ್ದಾರೆ.  ಅತಿಥಿ ಶಿಕ್ಷಕನ ವಿರುದ್ದ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.

Key words: Student, rapes, Guest teacher, arrested