ಬೆಂಗಳೂರು,ಏಪ್ರಿಲ್,7,2025 (www.justkannada.in): ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಜನಾಕ್ರೋಶ ಯಾತ್ರೆಗೆ ಮುಂದಾಗಿರುವ ಬಿಜೆಪಿ ವಿರುದ್ದ ಕಿಡಿಕಾರಿರುವ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್, ಬಿಜೆಪಿ ಮನೆಯೊಂದು ಮೂರು ಅಲ್ಲ, ನೂರು ಬಾಗಿಲು ಆಗಿದೆ. ಬಣಗಳು ಹೆಚ್ಚಾಗಿವೆ ಎಂದು ಲೇವಡಿ ಮಾಡಿದರು.
ಬಿಜೆಪಿ ಜನಾಕ್ರೋಶ ಯಾತ್ರೆ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಎಂ.ಬಿ ಪಾಟೀಲ್, ರಾಜ್ಯದಲ್ಲಿ ಬಿಜೆಪಿ ಅಧೋಗತಿಗೆ ತಲುಪಿದೆ ವಿಜಯೇಂದ್ರ, ಅಶೋಕ್, ಸೋಮಣ್ಣ ಹೀಗೆ ಹಲವು ಬಣಗಳಿವೆ . ರಾಜ್ಯದಲ್ಲಿ ಬಿಜೆಪಿ ತನ್ನ ಅಸ್ವಿತ್ವ ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದೆ ಬಿಜೆಪಿಯದ್ದು ಮನೆಯೊಂದು ಮೂರು ಅಲ್ಲ ನೂರು ಬಾಗಿಲು ಎಂದು ವ್ಯಂಗ್ಯವಾಡಿದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸತೀಶ್ ಜಾರಕಿಹೊಳಿ, ಈಶ್ವರ್ ಖಂಡ್ರೆ ಹೆಸರು ಪ್ರಸ್ತಾಪ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಎಂ.ಬಿ ಪಾಟೀಲ್, ಇದರಲ್ಲಿ ತಪ್ಪೇನಿದೆ. ಈಶ್ವರ್ ಖಂಡ್ರೆ ಸತೀಶ್ ಜಾರಕಿಹೊಳಿ ಸಮರ್ಥರಿದ್ದಾರೆ ಹೈಕಮಾಂಡ್ ಗೆ ಯಾವಾಗ ಬದಲಾವಣೆ ಮಾಡಬೇಕು ಅನ್ನಿಸುತ್ತೊ ಅವಾಗ ಮಾಡುತ್ತೆ. ನನಗೆ ಯಾವುದೇ ಆಹ್ವಾನ ಬಂದಿಲ್ಲ. ನಾನು ಕೇಳಿಯೂ ಇಲ್ಲ ಎಂದರು.
Key words: BJP, protest, State Government, Minister, M.B. Patil