ಧಾರವಾಡ,ಏಪ್ರಿಲ್,7,2025 (www.justkannada.in): ದೇಶದೊಳಗೆ ಚೀನಾ ಅತಿಕ್ರಮ ಪ್ರವೇಶ ಮಾಡಿದ್ದು, ಇದನ್ನ ಮುಚ್ಚಿ ಹಾಕಲು ಕೇಂದ್ರ ಸರ್ಕಾರ ವಕ್ಫ್ ವಿಚಾರ ಮುಂದೆ ತಂದಿದ್ದಾರೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಟೀಕಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸಂತೋಷ್ ಲಾಡ್, ಚೀನಾ 600ಕ್ಕೂ ಹೆಚ್ಚು ಹಳ್ಳಿಗಳನ್ನು ಕಬ್ಜಾ ಮಾಡಿದೆ. ಚೀನಾ ಭಾರತದ 176 ಕಿ.ಮೀ ಅತಿಕ್ರಮ ಪ್ರವೇಶಿಸಿದಕ್ಕೆ, ಬಿಜೆಪಿಯು ಅದನ್ನು ಮುಚ್ಚಿ ಹಾಕಲು ‘ವಕ್ಫ್’ ಬಿಲ್ ಮಂಡನೆ ನಾಟಕ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಚೀನಾದವರು ಎರಡು ಪೋಸ್ಟ್ ಕ್ರಿಯೇಟ್ ಮಾಡಿದ್ದಾರೆ. ಇದು ಎಲ್ಲೂ ಬರಬಾರದೆಂದು ವಕ್ಫ್ ಬಿಲ್ ತಂದಿದ್ದಾರೆ. ಬಡತನ, ನಿರುದ್ಯೋಗದ ಬಗ್ಗೆ ಚರ್ಚೆ ಆಗಬಾರದೆಂಬ ಉದ್ದೇಶದಿಂದ ಬಿಜೆಪಿಯವರು ಇಂತಹ ನಾಟಕ ಮಾಡುತ್ತಿದ್ದಾರೆ. ನಾಳೆ ಇದು ಕೋರ್ಟ್ ನಲ್ಲಿ ಬೀಳುತ್ತೆ ಅಂತ ಗೊತ್ತಿದ್ದರೂ ವಕ್ಫ್ ಬಿಲ್ ಅಂಗೀಕರಿಸಿದ್ದಾರೆ ಎಂದು ಸಚಿವ ಸಂತೋಷ್ ಲಾಡ್ ಹೇಳಿದರು.
Key words: Chinese, encroachment, country, Wakf bill, Minister, Santosh Lad