ಪೆಟ್ರೋಲ್, ಡೀಸಲ್ ಮೇಲಿನ ಅಬಕಾರಿ ಸುಂಕ 2 ರೂ. ಹೆಚ್ಚಳ

ನವದೆಹಲಿ, ಏಪ್ರಿಲ್ 7,2025 (www.justkannada.in):  ಪೆಟ್ರೋಲ್ ಮತ್ತು ಡೀಸಲ್ ಮೇಲಿನ ಅಬಕಾರಿ ಸುಂಕವನ್ನು ಕೇಂದ್ರ ಸರ್ಕಾರ  ಎರಡು ರೂಪಾಯಿ ಹೆಚ್ಚಿಸಿದೆ.

ಪೆಟ್ರೋಲ್ ಮೇಲೆ ಅಬಕಾರಿ ಸುಂಕ ಒಂದು ಲೀಟರ್​​ಗೆ 11 ರೂ ಇದ್ದದ್ದು 13 ರೂಗೆ ಏರಿಕೆ ಆಗುತ್ತಿದೆ. ಡೀಸಲ್ ಮೇಲಿನ ಅಬಕಾರಿ ಸುಂಕವು ಪ್ರತೀ ಲೀಟರ್​​ಗೆ 10 ರೂಗೆ ಏರಿಕೆ ಆಗುತ್ತಿದೆ. ಆದರೆ  ಅಬಕಾರಿ ಸುಂಕ ಹೆಚ್ಚಳದಿಂದ ಗ್ರಾಹಕರಿಗೆ ಯಾವುದೇ ರೀತಿಯ ಬೆಲೆ ಏರಿಕೆಯ ಬರೆ ಬೀಳುವುದಿಲ್ಲ. ಪೆಟ್ರೋಲ್ ಡೀಸೆಲ್ ಚಿಲ್ಲರೆ ಬೆಲೆಯಲ್ಲಿ ಹೆಚ್ಚಳವಿಲ್ಲ. ಇದರಿಂದ ಜನರಿಗೆ ಯಾವುದೇ ತೊಂದರೆ ಇಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಕೇಂದ್ರ ಪೆಟ್ರೋಲಿಯಂ ಮತ್ತು ನ್ಯಾಚುರಲ್ ಗ್ಯಾಸ್ ಸಚಿವಾಲಯ ಈ ವಿಚಾರದ ಬಗ್ಗೆ  ಟ್ವೀಟ್ ಮಾಡಿದ್ದು,  ಅಬಕಾರಿ ಸುಂಕ ಏರಿಕೆ ಮಾಡಲಾದರೂ ಪೆಟ್ರೋಲ್ ಮತ್ತು ಡೀಸಲ್​​ ನ ರೀಟೇಲ್ ದರಗಳನ್ನು ಹೆಚ್ಚಿಸಲಾಗುವುದಿಲ್ಲ ಎಂದು ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ತಮಗೆ ಮಾಹಿತಿ ನೀಡಿರುವುದಾಗಿ ಸಚಿವಾಲಯವು ಈ ಪೋಸ್ಟ್​​​ನಲ್ಲಿ ತಿಳಿಸಿದೆ.

Key words: Excise duty, petrol, diesel, increased, Rs 2