ಮೈಸೂರು, ಏಪ್ರಿಲ್ ,8,2025 (www.justkannada.in): ವಿಶ್ವ ಆರೋಗ್ಯ ದಿನದ ಅಂಗವಾಗಿ “ಆರೋಗ್ಯಕರ ಆರಂಭ, ಭರವಸೆಯ ಭವಿಷ್ಯ” ಎಂಬ ಥೀಮ್‌ನೊಂದಿಗೆ ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನ ಸಮುದಾಯ ವೈದ್ಯಕೀಯ ವಿಭಾಗದ ವತಿಯಿಂದ ವಿದ್ಯಾರ್ಥಿ ನಿಲಯದ ನೌಕರರಿಗಾಗಿ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಯಿತು.
ಶಿಬಿರದಲ್ಲಿ BMI, ಕಣ್ಣಿನ ತಪಾಸಣೆ, ರಕ್ತದ ಒತ್ತಡ, ಹಿಮೋಗ್ಲೋಬಿನ್, ಸಕ್ಕರೆ ಕಾಯಿಲೆ ಮತ್ತು ECG ಪರೀಕ್ಷೆಗಳೊಂದಿಗೆ ಅಗತ್ಯ ಆರೋಗ್ಯ ಸೇವೆಗಳನ್ನು ಒದಗಿಸಲಾಯಿತು.
ಡಾ. ಪ್ರವಿಣ್ ಕುಲಕರ್ಣಿ (ಉಪಪ್ರಾಚಾರ್ಯರು) ಮತ್ತು ಆಡಳಿತಾಧಿಕಾರಿ ಎಸ್.ಆರ್. ಸತೀಶ್ ಚಂದ್ರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಡಾ. ಸುನೀಲ್ ಕುಮಾರ್ ಡಿ, ಡಾ. ಅನಿಲ್ ಎಸ್ ಬಿಲಿಮಲೆ, ಡಾ. ವನಿತಾ ರೆಡ್ಡಿ ಮತ್ತು ಡಾ. ಪ್ರಿಯಾಂಕಾ ಉಪಸ್ಥಿತರಿದ್ದರು.
ಒಟ್ಟು 157 ನೌಕರರನ್ನು ತಪಾಸಣೆಗೊಳಪಡಿಸಲಾಯಿತು. ECG ತಪಾಸಣೆಗೆ ಒಳಪಟ್ಟ 12 ನೌಕರರಲ್ಲಿ 7 ಮಂದಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಜೆಎಸ್‌ಎಸ್ ಆಸ್ಪತ್ರೆಗೆ ಕಳುಹಿಸಲಾಯಿತು.
ಶಿಬಿರವನ್ನು ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಪ್ರೊ. ಡಾ. ಸುನೀಲ್ ಕುಮಾರ್ ಡಿ, ಸಹ ಪ್ರಾಧ್ಯಾಪಕ ಡಾ. ಶ್ವೇತಾಶ್ರೀ ಎಮ್, ಸೀನಿಯರ್ ರೆಸಿಡೆಂಟ್ ಡಾ. ಶ್ವೇತಾ ಎನ್ ಕುರ್ಕುರಿ ಅವರ ನೇತೃತ್ವದಲ್ಲಿ ಹಾಗೂ ಇತರೆ ಸಿಬ್ಬಂದಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತು ಗೃಹ ವೈದ್ಯರ ಸಹಕಾರದಿಂದ ಯಶಸ್ವಿಯಾಗಿ ನೆರವೇರಿಸಲಾಯಿತು.
Key words: Mysore, JSS Medical College, World Health Day