ಬೆಂಗಳೂರು,ಏಪ್ರಿಲ್,10,2025 (www.justkannada.in): ಮೆಟ್ರೋ, ಹಾಲು, ನೀರು ಸಿಲಿಂಡರ್ ,ಡೀಸೆಲ್, ವಿದ್ಯುತ್ ಬೆಲೆ ಏರಿಕೆ ಆಯ್ತು ಇದೀಗ ಖಾಸಗಿ ಶಾಲಾ ಶುಲ್ಕ ಹೆಚ್ಚಳವಾಗುವ ಸಾಧ್ಯತೆ ಇದೆ. ಹೌದು ಖಾಸಗಿ ಶಾಲಾ ಒಕ್ಕೂಟ ಶಾಲಾ ಶುಲ್ಕ ಹೆಚ್ಚಳ ಮಾಡಲು ಮುಂದಾಗಿದೆ.
ಈ ಕುರಿತು ಮಾತನಾಡಿರುವ ಕಥಪಾ ಅಧ್ಯಕ್ಷ ಲೋಕೇಶ್, ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಲಾಗಿದೆ. ಶಿಕ್ಷಕರಿಗೆ ಸಂಬಳ ಕೊಡಬೇಕು. ಶಿಕ್ಷಣ ಶುಲ್ಕ ಹೆಚ್ಚಳ ಅನಿವಾರ್ಯ ನಾವೂ ಶುಲ್ಕ ಹೆಚ್ಚಳ ಮಾಡಬೇಕಾದ ಪರಿಸ್ಥಿತಿಗೆ ಬಂದಿದ್ದೇವೆ. ಶಾಲಾ ವಾಹನ ಶುಲ್ಕವೂ ಹೆಚ್ಚಳಕ್ಕೆ ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.
ಇತ್ತ ಖಾಸಗಿ ಶಾಲಾ ಶುಲ್ಕ ಹೆಚ್ಚಳಕ್ಕೆ ಪೋಷಕರ ಸಂಘಟನೆ ವಿರೋಧ ವ್ಯಕ್ತಪಡಿಸಿದೆ. ಈ ಕುರಿತು ಮಾತನಾಡಿರುವ ಪೋಷಕರ ಸಂಘಟನೆ ಅಧ್ಯಕ್ಷ ಯೋಗಾನಂದ್, ಈಗಾಗಲೇ ಹಾಲು, ನೀರು, ಸಿಲಿಂಡರ್ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಈಗ ಖಾಸಗಿ ಶಾಲಾ ಶುಲ್ಕ ಹೆಚ್ಚಳವಾದರೆ ಪೋಷಕರಿಗೆ ತೊಂದರೆಯಾಗುತ್ತದೆ. ಮನಸೋ ಇಚ್ಚೆ ಶಾಲಾ ಶುಲ್ಕ ಹೆಚ್ಚಳ ಮಾಡಲು ಅವಕಾಶವಿಲ್ಲ ಎಂದಿದ್ದಾರೆ.
Key words: increase, private school, fees