ನವದೆಹಲಿ,ಸೆ,7,2019(www.justkannada.in): ತೆರಿಗೆ ವಂಚಿಸಿ ಸ್ವಿಸ್ ಬ್ಯಾಂಕ್‌ನಲ್ಲಿ ಹಣವಿಟ್ಟಿರುವವವರ ಖಾತೆಗಳ ವಿವರವನ್ನ ಭಾರತ ಪಡೆದುಕೊಂಡಿದೆ.
ಈ ಮೂಲಕ ಕಪ್ಪುಹಣದ ವಿರುದ್ದ ಭಾರತಕ್ಕೆ ಜಯ ಸಿಕ್ಕಂತಾಗಿದೆ. ಭಾರತ ಮತ್ತು ಸ್ವಿಜರ್ಲೆಂಡ್ ದೇಶಗಳ ನಡುವೆ ಏರ್ಪಟ್ಟಿರುವ ಮಾಹಿತಿ ಹಂಚಿಕೆ ಒಪ್ಪಂದದ ಅಡಿಯಲ್ಲಿ ಭಾರತದ ನಾಗರೀಕರು ಸ್ವಿಸ್ ಬ್ಯಾಂಕ್ ನಲ್ಲಿ ಹೊಂದಿರುವ ಖಾತೆಗಳ ವಿವರವನ್ನ ಸ್ವಿಜರ್ಲೆಂಡ್ ಸರ್ಕಾರ ನೀಡಿದೆ.
ಸ್ವಿಸ್ ಬ್ಯಾಂಕ್ ನಲ್ಲಿ ಖಾತೆ ಹೊಂದಿರುವವರ ವಿವರ ನೀಡುವಂತೆ ಭಾರತ ಸೇರಿ ಹಲವು ದೇಶಗಳು ಸ್ವಿಜರ್ಲ್ಯಾಂಡ್ ಗೆ ಒತ್ತಾಯಿಸಿದ್ದವು. ಇದೀಗ ಸ್ವಿಜರ್ಲ್ಯಾಂಡ್ ಸ್ವಿಸ್ ಬ್ಯಾಂಕ್ ನಲ್ಲಿ ಖಾತೆ ಹೊಂದಿರುವ 71 ದೇಶಗಳ ಖಾತೆದಾರರ ವಿವರವನ್ನ ವಿನಿಮಯ ಮಾಡಿಕೊಂಡಿದೆ.
75 ದೇಶಗಳಿಗೆ 31 ಲಕ್ಷ ಬ್ಯಾಂಕ್ ಖಾತೆ ಮಾಹಿತಿಯನ್ನು ಸ್ವಿಡ್ಜರ್‌ಲ್ಯಾಂಡ್ ನೀಡಿದ್ದು, ಸುಮಾರು 24 ಲಕ್ಷ ಖಾತೆ ಅಥವಾ ಖಾತೆದಾರರ ಮಾಹಿತಿಯನ್ನು ತಾನು ಪಡೆದುಕೊಂಡಿದೆ.
Key words: India – first listed -account holder -Swiss Bank – Government of Switzerland