ಬೆಂಗಳೂರು,ಏಪ್ರಿಲ್,11,2025 (www.justkannada.in): ಜಾತಿ ಗಣತಿ ವರದಿ ಮಂಡನೆಯು ಸಿಎಂ ಸಿದ್ದರಾಮಯ್ಯ ಕುರ್ಚಿ ಉಳಿಸಿಕೊಳ್ಳಲು ಇನ್ನೊಂದು ದಾಳ ಪ್ರಯೋಗ ಮಾಡಿದ್ದಾರೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಟೀಕಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ವಿ.ಸೋಮಣ್ಣ, ಸಿಎಂ ಸಿದ್ದರಾಮಯ್ಯ ಕುರ್ಚಿ ಉಳಿಸಿಕೊಳ್ಳಲು ದಾಳ ಪ್ರಯೋಗ ಮಾಡಿದ್ದಾರೆ. ಸಿದ್ದರಾಮಯ್ಯ ರಾಜ್ಯದ ಸಿಎಂ ಅಂತಾ ಅನ್ನಿಸುತ್ತಿಲ್ಲ. ಜಾತಿ ವರದಿ ವಿಚಾರದಲ್ಲಿ ಕಾಂಗ್ರೆಸ್ ನಲ್ಲೇ ಒಗ್ಗಟ್ಟಿಲ್ಲ ಸಾಧಕ ಬಾಧಕ ಏನಾಗುತ್ತೆ ಅನ್ನೋದರ ಬಗ್ಗೆಅರಿವಿಲ್ಲ ಜನರನ್ನ ಬೇರೆಡೆ ಡೈವರ್ಟ್ ಮಾಡಲು ಈ ವಿಚಾರ ತಂದಿದ್ದಾರೆ ಎಂದು ಕಿಡಿಕಾರಿದರು.
ಕುರ್ಚಿ ಉಳಿಸಿಕೊಳ್ಳಲು ಸಿಎಂ ಇನ್ನೊಂದು ದಾಳ ಪ್ರಯೋಗ ಮಾಡಿದ್ದಾರೆ. ಆ ಮೂಲಕ ಜನರ ಮೇಲೆ ಗದಾಪ್ರಹಾರ ನಡೆಸಲು ಮುಂದಾಗಿದ್ದಾರೆ. ಸಿದ್ದರಾಮಯ್ಯ ನಡೆ ಖಂಡನೀಯ ಎಂದು ಸೋಮಣ್ಣ ಹರಿಹಾಯ್ದರು.
Key words: Caste Census Report, Siddaramaiah, chair, Union Minister, V. Somanna