ತಂದೆಯನ್ನೇ ಕೊಂದು ಎಸ್ಕೇಪ್ ಆದ ಮಗ

ಮೈಸೂರು,ಏಪ್ರಿಲ್,14,2025 (www.justkannada.in): ಮೊಬೈಲ್  ವಿಚಾರಕ್ಕೆ ತಂದೆಯನ್ನೆ  ಮಗ ಕೊಲೆಗೈದು ಪರಾರಿಯಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಸೈಯದ್ ಮುತ್ತಿಫ್ (38) ಕೊಲೆಯಾದ ವ್ಯಕ್ತಿ. ಎರಡನೇ ಹೆಂಡತಿ ಮಗ ಮತೀನ್ (21) ಕೊಲೆ ಆರೋಪಿ. ಶಾಂತಿ ನಗರದ ಬಿಳಿ ಕಾಲೋನಿಯಲ್ಲಿ ಸೈಯದ್ ಮುತ್ತಿಫ್ ವಾಸವಿದ್ದರು. ಎರಡನೇ ಹೆಂಡತಿಯ ಮಗ ಕರೆ ಮಾಡಿದ್ದಕ್ಕೆ ತಂದೆ ಮುತ್ತಿಫ್ ಅಲ್ಲಿಗೆ ಹೋಗಿದ್ದರು. ತಂದೆ ಬರುತ್ತಿದ್ದಂತೆ  ಮಗ ಮತೀನ್ ಚಾಕು ತೆಗೆದು ತಂದೆಯ  ಎದೆಗೆ ಚುಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾನೆ

ತಂದೆ ಮಗನ ನಡುವೆ ರಂಜಾನ್ ಸಮಯದಲ್ಲಿ ಮೊಬೈಲ್ ವಿಚಾರಕ್ಕೆ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ.  ಕೊಲೆಯಾದ ವ್ಯಕ್ತಿ ಸೈಯದ್ ಮುತ್ತಿಫ್ಗೆ ಇಬ್ಬರು ಹೆಂಡತಿಯರು. ಎರಡು ಹೆಣ್ಣು ಮೊದಲನೇ ಹೆಂಡತಿ ಮಕ್ಕಳು, ಎರಡು  ಗಂಡು  ಮಕ್ಕಳು ಎರಡನೇ ಹೆಂಡತಿಯ ಮಕ್ಕಳು. ಇನ್ನು ಶವಾಗಾರದಲ್ಲಿ ಮೊದಲನೇ ಹೆಂಡತಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಈ ಕುರಿತು ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Mysore, son, killed, father