ಹಳಿ ತಪ್ಪಿದ ಗೂಡ್ಸ್ ರೈಲು:  ರೈಲು ಸಂಚಾರದಲ್ಲಿ ವ್ಯತ್ಯಯ

ಬೆಳಗಾವಿ,ಏಪ್ರಿಲ್,15,2025 (www.justkannada.in): ಗೂಡ್ಸ್ ರೈಲಿನ ಎರಡು ಬೋಗಿಗಳು ಹಳಿ‌ ತಪ್ಪಿ ಉರುಳಿಬಿದ್ದ ಘಟನೆ  ಇಂದು ಬೆಳಗಾವಿಯಲ್ಲಿ ನಡೆದಿದೆ.

ಮಿರಜ್ ಕಡೆಗೆ ಹೊರಟಿದ್ದ ಗೂಡ್ಸ್ ರೈಲಿನ‌ ಎರಡು ಬೋಗಿಗಳು  ಬೆಳಗಾವಿ ರೈಲು ನಿಲ್ದಾಣದ ಅರ್ಧ ಕಿ.ಮೀ ದೂರದಲ್ಲಿ ಹಳಿ‌ ತಪ್ಪಿದೆ. ಗೂಡ್ಸ್ ರೈಲು ಜಿಂದಾಲ್‌ ಕಾರ್ಖಾನೆಗೆ ಕಬ್ಬಿಣದ ಅದಿರು ತುಂಬಿಕೊಂಡು ಮಿರಜ್ ಕಡೆಗೆ ಹೊರಟಿತ್ತು ಎನ್ನಲಾಗಿದೆ.

ಒಂದು ಹಳಿಯಿಂದ ಇನ್ನೊಂದು ಹಳಿಗೆ ರೈಲನ್ನು ಬದಲಾಯಿಸುವ ಸಂದರ್ಭದಲ್ಲಿ ಈ ವ್ಯತ್ಯಾಸವಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದ ರೈಲು ಸಂಚಾರದಲ್ಲಿಯೂ ಅಡಚಣೆ ಉಂಟಾಗಿದೆ. ಸುಮಾರು 4 ತಾಸು ದುರಸ್ತಿ ಕಾರ್ಯ ನಡೆಯಲಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.

ಬೆಳಗಾವಿ – ಮಿರಜ್ ಮಾರ್ಗದಲ್ಲಿ ಎಲ್ಲ ರೈಲುಗಳು ಸಂಚಾರ ಸ್ಥಗಿತಗೊಂಡಿದ್ದು , ದುರಸ್ತಿ ಕಾರ್ಯ ಮುಗಿದ ಬಳಿಕ ಆರಂಭಗೊಳ್ಳಲಿವೆ. ಬೆಳಗಾವಿಯಿಂದ ಹೊರಟಿದ್ದ ರಾಣಿ ಚೆನ್ನಮ್ಮ ಎಕ್ಸ್ ಪ್ರೆಸ್, ಬೆಂಗಳೂರು ಜೋದ್ಪುರ್ ಎಕ್ಸ್‌ಪ್ರೆಸ್, ಬೆಂಗಳೂರಿಂದ ಭಗತ್ ಕೋಟಿ, ಕ್ಯಾಸಲ್ ರಾಕ್- ಮಿರಜ್ ಪ್ಯಾಸೆಂಜರ್, ಹರಿಪ್ರಿಯಾ ಎಕ್ಸ್‌ಪ್ರೆಸ್ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ.

Key words: Goods train,  derails, Belgaum