ಮೈಸೂರು, ಏ.೧೫,೨೦೨೫: ನಗರದ ವಾಸುದೇವ ಸೋಮಾನಿ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕಿಯಾಗಿ ಕೆಲಸ ನಿರ್ವಹಿಸಿ ಸೇವೆಯಿಂದ ನಿವೃತ್ತರಾಗಿದ್ದ ಪ್ರಾಧ್ಯಾಪಕರಾದ ಮಂಜುಳಾ ಬಿ ಸಿ ಅವರು ಕಾಲವಶರಾಗಿದ್ದಾರೆ.
ಕೆಲ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಬೆಂಗಳೂರಿನಲ್ಲಿ ಅಂಗಾಂಗ ವೈಫಲ್ಯದಿಂದ ನಿಧನರಾಗಿದ್ದಾರೆ.
ಮಹಿಳಾ ಸಂಘಟನೆಯಲ್ಲಿ ಕ್ರಿಯಾಶೀಲರಾಗಿದ್ದ ಇವರು ಮಗ ಮೇಜರ್ ಭಾರತಿ ನಂದ ಮತ್ತು ಸಂಗಾತಿ ಬೆಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ರಾಜಪ್ಪ ದಳವಾಯಿ ಅವರನ್ನು ಅಗಲಿದ್ದಾರೆ.
ಹಾಸನ ಸಮೀಪದ ಬುಸ್ತೇನಹಳ್ಳಿಯಲ್ಲಿ ಜನಿಸಿದ ಇವರು ವಿದ್ಯಾಭ್ಯಾಸಕ್ಕಾಗಿ ಕೂಡ ಹೋರಾಟ ಮಾಡಬೇಕಾದ ಪರಿಸ್ಥಿತಿಯನ್ನು ಎದುರಿಸಿದ್ದರು. ಅನಂತರ ಮೈಸೂರಿನಲ್ಲಿ ಕನ್ನಡ ಎಂ.ಎ., ಮುಗಿಸಿ ಕನ್ನಡ ಅಧ್ಯಾಪಕರಾಗಿ ಸೇವೆಗೆ ಸೇರಿಕೊಂಡರು.
ಅನೇಕ ವಿಚಾರ ಸಂಕಿರಣಗಳಲ್ಲಿ ಪ್ರಬಂಧಗಳನ್ನು ಮಂಡಿಸಿದ್ದ ಇವರು, ಅನೇಕ ಲೇಖನಗಳನ್ನು ಕೂಡ ಬರೆದಿದ್ದಾರೆ. ನಾಸ್ತಿಕರಾಗಿದ್ದ ಇವರು, ಶುಷ್ಕ ಆಚರಣೆಗಿಂತ ಹೆಣ್ಣಿಗೆ ವಿದ್ಯೆ ಮುಖ್ಯ ಎಂದು ನಂಬಿದ್ದರು.
ಬುಧವಾರ ದಿನಾಂಕ 16ರಂದು ಬೆಳಿಗ್ಗೆ 8 ಗಂಟೆಗೆ ಮೈಸೂರಿನ ಅವರ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
key words: Manjula B C, activist, women’s organisation, passes away
Manjula B C, an activist thinker of women’s organisation, passes away