ಬೆಂಗಳೂರು,ಏಪ್ರಿಲ್,19,2025 (www.justkannada.in): ಜಾತಿಗಣತಿ ವರದಿ ವಿಚಾರವಾಗಿ ಎಲ್ಲರ ಅಭಿಪ್ರಾಯ ಪಡೆದು ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಜಾತಿ ಗಣತಿ ವಿಚಾರವಾಗಿ ಅವರ ಅಭಿಪ್ರಾಯ ಹೇಳಿದ್ದಾರೆ. ಎಲ್ಲರ ಅಭಿಪ್ರಾಯ ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ತಾರೆ. ಇದು ಒಬ್ಬ ನಿರ್ಧಾರ ಅಲ್ಲ. ಕ್ಯಾಬಿನೆಟ್ ನಿರ್ಧಾರ ಆಗುತ್ತೆ ಸಾಮಾಜಿಕ ಶೈಕ್ಷಣಿಕ, ಆರ್ಥಿಕವಾಗಿ ಯಾವ ಸಮುದಾಯ ಹೇಗಿದೆ ಅದರಲ್ಲಿ ಜಾತಿ ಎಷ್ಟಿದೆಯೇ ಅಂತಾ ಸರ್ಕಾರಕ್ಕೆ ವರದಿ ಕೊಟ್ಟಿದ್ದಾರೆ. ಕೆಲವರು ನಮ್ಮ ಸಮುದಾಯ ಹೆಚ್ಚಿರಬೇಕಿತ್ತು ಅಂತಾ ಹೇಳಿದ್ದಾರೆ. ಅಧ್ಯಯನ ಮಾಡಿದ ಮೇಲೆ ವೈಜ್ಞಾನಿಕ ಸಮೀಕ್ಷೆ ಅನ್ನಿಸುತ್ತಿದೆ ಎಂದರು.
ಒಬ್ಬ ಬೋರ್ ವೇಲ್ ಹಾಕಿಸಿದರೆ ಅಲ್ಲಿ ನೀರು ಬರುತ್ತಾ ಇಲ್ವಾ.. ಒಣಗಿ ಹೋಗಿದೆಯಾ ಅಂತಲೂ ಮಾಹಿತಿ ಕಲೆ ಹಾಕ್ತಾರೆ. ಒಳ ಮೀಸಳಾತಿ ವರದಿಗೆ ನಾಗಮೋಹನ್ ದಾಸ್ ಗೆ ಹೇಳಿದ್ದೇವೆ. ಈ ಜಾತಿಗಣತಿ ವರದಿಯನ್ನ ಒಳ ಮೀಸಲಾತಿಗೆ ಹೋಲಿಸುತ್ತಾರೆ ಎಂದು ಪರಮೇಶ್ವರ್ ತಿಳಿಸಿದರು.
Key words: Caste census, decision, opinion, Home Minister, Parameshwar