ಸಿಎಂ ಸಿದ್ದರಾಮಯ್ಯರನ್ನ ಹಾಡಿ ಹೊಗಳಿದ ಗೃಹ ಸಚಿವ ಪರಮೇಶ್ವರ್

ತುಮಕೂರು,ಏಪ್ರಿಲ್,19,2025 (www.justkannada.in): ಸಿಎಂ ಸಿದ್ದರಾಮಯ್ಯ ಅವರನ್ನ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹಾಡಿ ಹೊಗಳಿದ್ದಾರೆ.

ಅಧುನಿಕ ರಾಜಕಾರಣದಲ್ಲಿ ಸಿದ್ದರಾಮಯ್ಯರನ್ನ ಹೋಲಿಕೆ ಮಾಡಲು ಆಗುತ್ತಾ..? ಸಿದ್ದರಾಮಯ್ಯರನ್ನು ಹೋಲಿಕೆ ಮಾಡಲು ಯಾರೂ ಇಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದರು.

ತುಮಕೂರಿನ ಶ್ರೀದೇವಿ ಮೆಡಿಕಲ್ ಕಾಲೇಜಿನಲ್ಲಿ ನಡೆದ ಕುರುಬರ ಸಾಹಿತಿಗಳ ಸಮಾವೇಶದಲ್ಲಿ ಮಾತನಾಡಿದ ಗೃಗ ಸಚಿವ ಪರಮೇಶ್ವರ್, ಸಿಎಂ ಸಿದ್ದರಾಮಯ್ಯ ಕೇವಲ 16 ಬಜೆಟ್ ಮಂಡಿಸಿರೋದು ಅಲ್ಲ.  ಅವರ ಸಾಧನೆ ತುಂಬಾ ಇದೆ.  2023ರಲ್ಲಿ ಚುನಾವಣಾ ಗ್ಯರಾಂಟಿ ಪ್ರಣಾಳಿಕೆ ಜವಾಬ್ದಾರಿ ನನಗೆ ನೀಡಿದ್ದರು  ಸಿಎಂ ಸಿದ್ದರಾಮಮಯ್ಯರಿಗೆ ಬಡವರ ಬಗ್ಗೆ ತುಂಬಾ ಕಾಳಜಿ ಇದೆ  ಕರ್ನಾಟಕ ರಾಜಕಾರಣ ಹೊಸ ದಿಕ್ಕನ್ನ ಪಡೆದುಕೊಳ್ಳುತ್ತಿದೆ. ದೇಶಕ್ಕೊಂದು ಮಾದರಿಯಾಗುವ ತೀರ್ಮಾನ ಕರ್ನಾಟಕದಲ್ಲಿ ಆಗಲಿದೆ ಎಂದು ಪರಮೇಶ್ವರ್ ತಿಳಿಸಿದರು.

Key words: Home Minister, Parameshwar, praised, CM Siddaramaiah.