ದಾವಣಗೆರೆ,ಏಪ್ರಿಲ್,21,2025 (www.justkannada.in): ಸಿಎಂ ಕುರ್ಚಿ ಅಲುಗಾಡುವ ವೇಳೆ ಜಾತಿ ಗಣತಿ ಮುನ್ನೆಲೆಗೆ ಬರುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕಿಡಿಕಾರಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿವೈ ವಿಜಯೇಂದ್ರ, 10 ಜಿಲ್ಲೆಗಳಲ್ಲಿ 3ನೇ ಹಂತದ ಜನಾಕ್ರೋಶ ಯಾತ್ರೆ ನಡೆಯಲಿದೆ. ರಾಜ್ಯ ಸರ್ಕಾರಕ್ಕೆ ಜನಾಕ್ರೋಶದ ಬಿಸಿ ತಟ್ಟಿದೆ. ಈ ಕಾರಣಕ್ಕೆ ಸಿಎಂ ಸಿದ್ದರಾಮಯ್ಯ ಬೆಳಗಾವಿ ಸೇರಿ ಬೇರೆ ಬೇರೆ ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಸಿಎಂ ಕುರ್ಚಿ ಅಲುಗಾಡುವ ವೇಳೆ ಜಾತಿಗಣತಿ ಮುನ್ನೆಲೆಗೆ ಬರುತ್ತೆ ಸಿಎಂ ಜಾತಿ ಜಾತಿಗಳ ನಡುವೆ ಜಗಳ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಜಾತಿಗಣತಿ ಜಾರಿಗೆ ಇನ್ನೂ 1 ವರ್ಷ ಬೇಕೆಂದು ಸತೀಶ್ ಹೇಳಿದ್ದಾರೆ ಎಂದು ಹರಿಹಾಯ್ದರು.
ಜನಿವಾರ ತೆಗೆಸುದ ಪ್ರಕರಣದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಬಿವೈ ವಿಜಯೇಂದ್ರ ತಿಳಿಸಿದರು.
Key words: Caste census, comes, CM, chair, BY Vijayendra