ವಿಂಗ್ ಕಮಾಂಡರ್ ಮೇಲೆ ಹಲ್ಲೆ: ಇಬ್ಬರ ವಿರುದ್ದ FIR

ಬೆಂಗಳೂರು,ಏಪ್ರಿಲ್,21,2025 (www.justkannada.in):  ಹಿಂಬದಿಯಿಂದ ಕಾರಿಗೆ ಬೈಕ್ ಟಚ್ ಆಗಿದ್ದಕ್ಕೆ ವಿಂಗ್ ಕಮಾಂಡರ್ ಮೇಲೆ ಇಬ್ಬರು ಅಪರಿಚಿತರು ಹಲ್ಲೆ ನಡೆಸಿರುವ  ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಸಿವಿ ರಾಮನ್ ನಗರದಲ್ಲಿ ಈ ಘಟನೆ ನಡೆದಿದೆ. ಶಿಲಾಧಿತ್ಯ ಬೋಸ್ ಹಲ್ಲೆಗೊಳಗಾದ ವಿಂಗ್ ಕಮಾಂಡರ್, ಶಿಲಾದಿತ್ಯ ಬೋಸ್ ಕೋಲ್ಕತ್ತಾಗೆ ಹೋಗಲು ಏರ್ ಪೋರ್ಟ್ ಗೆ ಪತ್ನಿ ಜೊತೆ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಹಿಂಬದಿಯಿಂದ ಕಾರಿಗೆ ಬೈಕ್ ಟಚ್ ಆಗಿದೆ.

ಈ ವೇಳೆ ಬೈಕ್ ನಲ್ಲಿದ್ದ ದುಷ್ಕರ್ಮಿಗಳು ಶಿಲಾಧಿತ್ಯ ಬೋಸ್ ಕಾರಿನಿಂದ ಕೆಳಕ್ಕೆ ಇಳಿಯುತ್ತಿದ್ದಂತೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಹಲ್ಲೆಗೊಳಾಗದ ವಿಂಗ್ ಕಮಾಂಡರ್ ಶಿಪಾದಿತ್ಯ ಬೋಸ್ ಅವರ  ಮುಖ ಮತ್ತು ತಲೆಗೆ ಗಾಯಗಳಾಗಿದ್ದು, ರಕ್ತ ಹರಿದಿದೆ. ತಮ್ಮ ಮೇಲೆ ಆದ ಹಲ್ಲೆ ಕುರಿತು ವಿವರಿಸಿ ಅಧಿಕಾರಿ ವಿಡಿಯೋ ಮಾಡಿದ್ದಾರೆ.

ಈ ಸಂಬಂಧ ಶಿಲಾದಿತ್ಯ ಬೋಸ್ ಅವರ ಪತ್ನಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಇಬ್ಬರ ಮೇಲೆ ಎಫ್ ಐಆರ್ ದಾಖಲಾಗಿದೆ.

Key words: Assault,  Wing Commander, FIR, Bangalore