ಹಣ ಅಕ್ರಮ ವರ್ಗಾವಣೆ : ತೆಲುಗು ನಟ “ಪ್ರಿನ್ಸ್‌ “ ಮಹೇಶ್‌ ಬಾಬುಗೆ ಇಡಿ ಸಮನ್ಸ್..!

Ed summons Telugu actor 'Prince' Mahesh Babu in money laundering case

ಬೆಂಗಳೂರು, ಏ.೨೨,೨೦೨೫: ಅಕ್ರಮ ಹಣ ವರ್ಗಾವಣೆ ದಂಧೆ (ಮನಿ ಲಾಂಡ್ರಿಂಗ್) ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ಚಿತ್ರನಟ ಮಹೇಶ್‌ ಬಾಬು ವಿರುದ್ಧ ಜಾರಿ ನಿರ್ದೆಶನಾಲಯ ಸಮನ್ಸ್‌ ಜಾರಿಗೊಳಿಸಿದೆ. ಇದೇ ತಿಂಗಳ ೨೭ ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

ಹೈದರಬಾದ್ ಮೂಲದ ರಿಯಲ್‌  ಎಸ್ಟೇಟ್‌ ಕಂಪನಿಯೊಂದರಿಂದ ಹಣ ಪಡೆದ ಪ್ರಕರಣಕ್ಕೆ ಸಂಬಂದಿಸಿದಂತೆ ನಟ ಮಹೇಶ್‌ ಬಾಬುಗೆ ಇಡಿ ಸಮನ್ಸ್‌ ಜಾರಿಗೊಳಿಸಿದೆ ಎನ್ನಲಾಗಿದೆ.

ಈ ಸಂಬಂದ ರಾಷ್ಟ್ರೀಯ ಸುದ್ಧಿ ವಾಹಿನಿಗಳಲ್ಲಿ ಪ್ರಸಾರವಾದ ಮಾಹಿತಿ ಅನ್ವಯ, ಹೈದ್ರಬಾದ್‌ ಮೂಲದ ನೂರಾರು ಕೋಟಿ ರೂ. ವ್ಯವಹಾರ ನಡೆಸುವ ರಿಯಲ್‌ ಎಸ್ಟೇಟ್‌ ಕಂಪನಿಯ ವಿಚಾರಣೆ ವೇಳೆ ನಟ ಮಹೇಶ್‌ ಬಾಬುಗೆ ಹಣ ನೀಡಿರುವುದು ಪತ್ತೆಯಾಗಿದೆ.

ಸೋರಿಕೆಯಾದ ಮಾಹಿತಿ ಪ್ರಕಾರ ನಟ ಮಹೇಶ್‌ ಬಾಬುಗೆ ರಿಯಲ್‌ ಎಸ್ಟೇಟ್‌ ಕಂಪನಿ ಒಟ್ಟು ೫.೯ ಕೋಟಿ ರೂ. ಹಣ ಪಾವತಿಸಿದೆ. ಈ ಪೈಕಿ ನಟ ಮಹೇಶ್‌ ಬಾಬು ೩.೪ ಕೋಟಿ ರೂ. ಹಣವನ್ನು ಚೆಕ್‌ ಮೂಲಕ ಹಾಗೂ ೨.೫ ಕೋಟಿ ರೂ. ನಗದು ರೂಪದಲ್ಲಿ ಪಡೆದಿದ್ದಾರೆ.

ಈ ರೀತಿ ಬೃಹತ್‌ ಮೊತ್ತವನ್ನು ನಗದು ರೂಪದಲ್ಲಿ ಪಡೆಯುವುದು ಅಪರಾದವಾದ್ದರಿಂದ ಜಾರಿ ನಿರ್ದೇಶನಾಲಯ ನಟನಿಗೆ ಏ. ೨೭ ರಂದು  ವಿಚಾರಣೆಗೆ ಹಾಜರಾಗಲು ಸಮನ್ಸ್‌ ಜಾರಿಗೊಳಿಸಿದೆ ಎಂದು ಸುದ್ಧಿ ಪ್ರಸಾರವಾಗಿದೆ.

key words: Ed, summons, Telugu actor, ‘Prince’ Mahesh Babu, money laundering

Ed summons Telugu actor ‘Prince’ Mahesh Babu in money laundering case