ಮೈಸೂರು, ಏ.೨೨,೨೦೨೫: ಬೆಂಗಳೂರಿನಲ್ಲಿ ವಿಂಗ್ ಕಮಾಂಡರ್ ನ ಆಟಾಟೋಪ ಘಟನೆ ಮಾಸುವ ಮುನ್ನವೇ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪೊಲೀಸರ ಮುಂಜಾಗ್ರತ ಕ್ರಮದಿಂದ ಹೊರ ರಾಜ್ಯದ ಪುಂಡರ ಅಟ್ಟಹಾಸಕ್ಕೆ ಕಡಿವಾಣ ಹಾಕಲಾಗಿದೆ.
ನಗರದ ಧಾರ್ಮಿಕ ಕ್ಷೇತ್ರವಾದ ಚಾಮುಂಡಿಬೆಟ್ಟದಲ್ಲಿ ಕೆಲ ಪುಂಡ ಯುವಕರು ಅಸಭ್ಯವಾಗಿ ವರ್ತಿಸುತ್ತಿದ್ದರು. ಈ ಬಗ್ಗೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದರು ಅದಕ್ಕೆ ಕೇರ್ ಮಾಡದೆ ತಮ್ಮ ಆಟಾಟೋಪ ಮುಂದುವರೆಸಿದ್ದರು. ಕಡೆಗೆ ಈ ಪುಂಡರ ವಿಕೃತಿಯನ್ನು ಸೆರೆ ಹಿಡಿದು ಸೋಷಿಯಲ್ ಮೀಡಿಯಾದಲ್ಲಿ ಹಾಕಿ ಅದನ್ನು ನಗರ ಪೊಲೀಸರ ಗಮನಕ್ಕೆ ತರಲಾಯಿತು. ಕೂಡಲೇ ಕಾರ್ಯ ಪ್ರವೃತ್ತರಾದ ನಗರ ಪೊಲೀಸರು ಸ್ಥಳಕ್ಕ ಧಾವಿಸಿ ಪುಂಡರನ್ನು ವಶಕ್ಕೆ ಪಡೆದರು.
ಕಮಿಷನರ್ ಹೇಳಿದ್ದು….
ಹೊರ ರಾಜ್ಯದ ಕೆಲ ಹುಡುಗರು ಚಾಮುಂಡಿ ಬೆಟ್ಟದ ಮೆಟ್ಟಿಲಿನಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದರು. ಇದನ್ನು ಕಂಡ ಸಾರ್ವಜನಿಕರು ದೂರು ನೀಡಿದರು. ಈ ಮೇರೆಗೆ,ಚಾಮುಂಡಿ ಬೆಟ್ಟದ OP ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಇವರನ್ನು ಠಾಣೆಗೆ ಕರೆತಂದು ತಿಳುವಳಿಕೆ ನೀಡಿ, ಇವರುಗಳ ಮೇಲೆ ಲಘು ಪ್ರಕರಣ (ಪಿಟಿ ಕೇಸ್) ದಾಖಲಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತೆ ಸೀಮಾ ಲಟ್ಕರ್ ಅವರು “ಜಸ್ಟ್ ಕನ್ನಡ” ಗೆ ಮಾಹಿತಿ ನೀಡಿದರು.
key words: Chamundi Hill, menace, hooligans, outside the state, police, Mysore
SUMMARY:
Some miscreants were seen misbehaving at Chamundi Hill, a religious place in the city. The public objected to this, With the precautionary measures taken by the police in Mysuru, the menace of hooligans from outside the state has been curbed.