ಬೆಂಕಿಯಲ್ಲಿ ಅರಳಿದ ಹೂ : ಮಧುಕೇಶ್ವರದ ವೈದ್ಯ ಡಾ,ಮಹೇಶ್‌  ಈಗ ಐಪಿಎಸ್‌ ಅಧಿಕಾರಿ..!

Dr Mahesh, a doctor from Madhukeshwar, is now an IPS officer. Dr. Mahesh hails from a village from Bijapur District and raised by mother with another engineer sibling. Mahesh studied in Government and Morarji school and secured a good rank enough to get admission in Hassan medical college to purse MBBS. Post MBBS working as Govt doctor in madhukeshwar primary health centre.

ಮೈಸೂರು, ಏ.೨೨,೨೦೨೫:  ಯುಪಿಎಸ್ಸಿ ಪರೀಕ್ಷೆಯಲ್ಲಿ ಕರ್ನಾಟಕದ ಡಾ.ಮಹೇಶ್‌ ೪೮೨ ನೇ ರ್ಯಾಂಕ್‌ ಪಡೆದು ಐಪಿಎಸ್‌ ಗೆ ಆಯ್ಕೆಗೊಂಡಿದ್ದಾರೆ.

ಮೂಲತಃ ವೈದ್ಯರಾದ ಡಾ.ಮಹೇಶ್‌, ಐಪಿಎಸ್‌ ಅಧಿಕಾರಿಯಾಗಬೇಕು ಎಂಬ ಹಂಬಲದಿಂದ ಮೆಡಿಕಲ್‌ ವ್ಯಾಸಂಗದ ಬಳಿಕವೂ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಉನ್ನತ ಹುದ್ದೆಗೆ ಆಯ್ಕೆಯಾಗಿದ್ದಾರೆ. ಡಾ.ಮಹೇಶ್ ಬಿಜಾಪುರ ಜಿಲ್ಲೆಯ ಹಳ್ಳಿಯಿಂದ ಬಂದವರು.

ಪೋಷಕರ ಸಹಕಾರದಿಂದ ಅದರಲ್ಲೂ ತಾಯಿಯ ಪ್ರೋತ್ಸಾಹ ಹಾಗೂ ಪ್ರೇರಣೆಯಿಂದ ಡಾ.ಮಹೇಶ್‌ ಈ ಸಾಧನೆ ಮಾಡಲು ಸಾಧ್ಯವಾಯಿತು. ಮಹೇಶ್ ಸರ್ಕಾರಿ ಮತ್ತು ಮೊರಾರ್ಜಿ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದು, ಬಳಿಕ ಹಾಸನ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಪಡೆದರು. ೨೦೧೨ ರಲ್ಲಿ ಪ್ರವೇಶ ಪಡೆದು  ೨೦೧೮ ರಲ್ಲಿ ಮೆಡಿಕಲ್‌ ಪದವಿ ಪೂರ್ಣಗೊಳಿಸಿದರು.

ನಂತರ ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಮಧುಕೇಶ್ವರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸರ್ಕಾರಿ ವೈದ್ಯರಾಗಿ ಕೆಲಸಕ್ಕೆ ಸೇರ್ಪಡೆ. ವೈದ್ಯರಾದರು ಐಪಿಎಸ್‌ ಹುದ್ದೆಗೇರಬೇಕು ಎಂಬ ತುಡಿತ ಕಡಿಮೆಯಾಗದ ಕಾರಣ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಬೇಕಾದ ಸೂಕ್ತ ತರಬೇತಿ ಪಡೆದರು.

ಬಡತನ ಮತ್ತು ಇತರ ತೊಂದರೆಗಳ ಹೊರತಾಗಿಯೂ ಐಪಿಎಸ್ ಅಧಿಕಾರಿಯಾಗುವ ಕನಸನ್ನು ಎಂದಿಗೂ ಕೈಬಿಡಲಿಲ್ಲ ಡಾ.ಮಹೇಶ್. ಕನ್ನಡ ಸಾಹಿತ್ಯವನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡು ಯುಪಿಎಸ್ಸಿ ಸಂದರ್ಶನದಲ್ಲಿ ಎರಡು ಬಾರಿ ಹಾಜರಾಗಿದ್ದರು ಆದರೆ ಅರ್ಹತೆ ಪಡೆದಿರಲಿಲ್ಲ. ಇದೀಗ ಐದನೇ ಪ್ರಯತ್ನದಲ್ಲಿ ಯಶ ಗಳಿಸಿದ್ದಾರೆ.

ಅತ್ಯಂತ ಹಿಂದುಳಿದ ಮಡಿವಾಳ ಸಮುದಾಯದ ಮಹೇಶ್‌ ಅವರ ಈ ಸಾಧನೆಗೆ ಅವರ ತಾಯಿಯೇ ಪ್ರೇರಣೆ. ಅನೇಕ ಜೀವನ ಸವಾಲುಗಳ ಹೊರತಾಗಿಯೂ ಅಸಾಧಾರಣ ಸಾಧನೆ. ಉತ್ತಮ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಪ್ರೋತ್ಸಾಹಿಸಿದ ತಾಯಿಗೆ ಈ ಸಾಧನೆಯನ್ನು ಡಾ. ಮಹೇಶ್‌ ಅರ್ಪಿಸಿದ್ದಾರೆ.

key words: Dr Mahesh, IPS officer. UPSC, Karnataka

SUMMARY: 