ನವದೆಹಲಿ,ಏಪ್ರಿಲ್,23,2025 (www.justkannada.in): ಪಹಲ್ಗಾಮ್ ನಲ್ಲಿ ಉಗ್ರರ ದಾಳಿ ಬೆನ್ನಲ್ಲೆ ಪ್ರವಾಸಿಗರನ್ನ ಸುರಕ್ಷಿತವಾಗಿ ರವಾನಿಸಲು ವಿಮಾನ ಪ್ರಯಾಣ ದರ ಹೆಚ್ಚಳ ಮಾಡದಂತೆ ಸೂಚನೆ ನೀಡಿದ್ದೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಉಗ್ರರ ದಾಳಿಯಲ್ಲಿ ರಾಜ್ಯದ ಮೂವರು ಮೃತಪಟ್ಟು ಇಬ್ಬರು ಗಾಯಗೊಂಡಿದ್ದಾರೆ. ಮೃತದೇಹ ರವಾನೆಗೆ ಲೆಫ್ಟಿನಂಟ್ ಗವರ್ನರ್ ಜೊತೆ ಮಾತನಾಡಿದ್ದೇನೆ. ವಿಮಾನಯಾನ ಸಚಿವರ ಜೊತೆಯೂ ಮಾತನಾಡಿದ್ದೇನೆ. ಕಾಶ್ಮೀರದಿಂದ ವಾಪಸಾಗುವವರಿಗೆ ವಿಮಾನ ವ್ಯವಸ್ಥೆಗೆ ತಿಳಿಸಿದ್ದೇನೆ ಎಂದರು.
ಹಾಗೆಯೇ ವಿಮಾನ ಪ್ರಯಾಣ ದರ ಏರಿಕೆ ಬಗ್ಗೆ ದೂರು ಬಂದಿತ್ತು. ಹೀಗಾಗಿ ದರ ಏರಿಸಬಾರದು ಎಂದು ನಾನು ಸೂಚನೆ ನೀಡಿದ್ದೇನೆ. ಭಯೋತ್ಪಾದನೆ ನಿರ್ಮೂಲನೆಗೆ ಪ್ರಧಾನಿ ಮೋದಿ ಸರ್ಕಾರ ಮುಂದಾಗಲಿದೆ ಎಂದು ಪ್ರಹ್ಲಾದ್ ಜೋಶಿ ತಿಳಿಸಿದರು.
Key words: Terrorist attack, Pahalgam, Union Minister, Pralhad Joshi