ಬೆಂಗಳೂರು,ಏಪ್ರಿಲ್,24,2025 (www.justkannada.in): ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಬಲಿಯಾದ ಇಬ್ಬರು ಕನ್ನಡಿಗರಾದ ಮಂಜುನಾಥ್, ಭರತ್ ಭೂಷಣ್ ಅವರ ಪಾರ್ಥಿವ ಶರೀರ ಈಗಾಗಲೇ ತಮ್ಮ ಸ್ವಗ್ರಾಮ ತಲುಪಿದೆ.
ಇಂದು ಮುಂಜಾನೆ 3.45 ಕ್ಕೆ ದೆಹಲಿಯಿಂದ ಬೆಂಗಳೂರಿಗೆ ಇಬ್ಬರ ಪಾರ್ಥಿವ ಶರೀರ ಬಂದಿದ್ದು ನಂತರ ಬೆಂಗಳೂರಿನ ಮತ್ತಿಕೆರೆ ನಿವಾಸಕ್ಕೆ ಭರತ್ ಭೂಷಣ್ ಅವರ ಪಾರ್ಥಿವ ಶರೀರ ಕೊಂಡೊಯ್ಯಲಾಯಿತು. ಹಾಗೆಯೇ ಮಂಜುನಾಥ್ ಅವರ ಪಾರ್ಥಿವ ಶರೀರವನ್ನ ಶಿವಮೊಗ್ಗಕ್ಕೆ ಕಳುಹಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನ ಮತ್ತೀಕೆರೆಗೆ ತೆರಳಿ ಭರತ್ ಭೂಷಣ್ ಅವರ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.
ಘಟನೆ ನಡೆದ ನಂತರ ಸಚಿವ ಸಂತೋಷ್ ಲಾಡ್ ನೇತೃತ್ವದಲ್ಲಿ ಅಧಿಕಾರಿ ವರ್ಗ ಕಾಶ್ಮೀರಕ್ಕೆ ತೆರಳಿತ್ತು. ಸರ್ಕಾರ ಮೃತ ದೇಹಗಳನ್ನು ತರಲು ಎಲ್ಲಾ ವ್ಯವಸ್ಥೆ ಕಲ್ಪಿಸಿತ್ತು. ರಾಜ್ಯದಿಂದ ಕಾಶ್ಮೀರ ಪ್ರವಾಸದಲ್ಲಿದ್ದ ಸುಮಾರು 180 ಮಂದಿ. ಈಗಾಗಲೇ 167 ಮಂದಿ ಸಂಪರ್ಕ ಮಾಡಿದ ಸಚಿವ ಸಂತೋಷ್ ಲಾಡ್. ಎಲ್ಲರೂ ಸುರಕ್ಷಿತವಾಗಿದ್ದು ಎಲ್ಲರನ್ನ ವಾಪಸ್ ಕರೆತರುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ.
Key words: Terrorist attack, two Kannadigas, Bodies, hometown