ಉಗ್ರರ ದಾಳಿ: ಕೇಂದ್ರದ ಭದ್ರತಾ ವೈಫಲ್ಯ ಕಾರಣ ಎನ್ನಲು ಕಾಂಗ್ರೆಸ್‌ ಗೆ ನೈತಿಕತೆ ಇಲ್ಲ- ಶಿವಕುಮಾರ್.‌

jp leader and former mayor Shivakumar said the Congress party and its leaders have no morality to blame the security failure of the central government for the terror attack in Pahalgam in Jammu and Kashmir.

ಮೈಸೂರು, ಏ.೨೪,೨೦೨೫ : ಜಮ್ಮು ಕಾಶ್ಮೀರದ ಪಹಲ್ಗಾಮ್‌ ನಲ್ಲಿ ನಡೆದ ಉಗ್ರರ ದಾಳಿಗೆ ಕೇಂದ್ರ ಸರಕಾರದ ಭದ್ರತಾ ವೈಫಲ್ಯವೇ ಕಾರಣ ಎಂದು ಆರೋಪಿಸಲು ಕಾಂಗ್ರೆಸ್‌ ಪಕ್ಷಕ್ಕೆ ಹಾಗೂ ಆ ಪಕ್ಷದ ನಾಯಕರಿಗೆ ಯಾವುದೇ ನೈತಿಕತೆ ಇಲ್ಲ ಎಂದು‌ ಬಿಜೆಪಿ ಮುಖಂಡ ಹಾಗೂ ಮಾಜಿ ಮೇಯರ್ ಶಿವಕುಮಾರ್‌ ಟೀಕಿಸಿದ್ದಾರೆ.

ಕಳೆದ ಹಲವಾರು ದಶಕಗಳಿಂದ ದೇಶದ ಆಡಳಿತ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್‌ ಪಕ್ಷದ ನಿಲುವೆ ಭಾರತದ ಇಂದಿನ ದುಸ್ಥಿತಿಗೆ ಮೂಲ ಕಾರಣ. ಒಂದು ಕೋಮಿನ ಜನರನ್ನು ಓಟಿಗೆ ಒಲೈಕೆ ಮಾಡುವ ಸಲುವಾಗಿ ಅವರ ಎಲ್ಲಾ ದುಷ್ಕೃತ್ಯಗಳಿಗೂ ಪರೋಕ್ಷ ಕುಮ್ಮಕ್ಕೂ ನೀಡುತ್ತಾ ಬಂದಿದ್ದೆ ಕಾಂಗ್ರೆಸ್‌ ಪಕ್ಷ. ೧೯೯೦ ರಲ್ಲಿ ಕಾಶ್ಮೀರಿ ಪಂಡಿತರನ್ನು ಕಣಿವೆ ರಾಜ್ಯದಿಂದ ಬಲವಂತವಾಗಿ ಹೊರ ದಬ್ಬಲು ಕಾರಣವೇನು ಎಂಬುದು ಇಡೀ ಜಗತ್ತಿಗೆ ತಿಳಿದಿದೆ. ಕಾಶ್ಮೀರಿ ಪಂಡಿತರ ಮೇಲೆ ದೌರ್ಜನ್ಯ, ಅತ್ಯಾಚಾರ ಎಸಗಿ ಭಯಭೀತರನ್ನಾಗಿ ಮಾಡಿ ರಾಜ್ಯ ತೊರೆಯುವಂತೆ ಮಾಡಿದರು. ಆ ನಂತರವೂ ಮತೀಯ ಅಲ್ಪಸಂಖ್ಯಾತರ ಅಟ್ಟಹಾಸ ಎಗ್ಗಿಲ್ಲದೆ ಸಾಗುತ್ತಿತ್ತು.

ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾದ ಬಳಿಕ ಉಗ್ರರ ಅಟ್ಟಹಾಸಕ್ಕೆ ಬ್ರೇಕ್‌ ಹಾಕಲಾಯಿತು. ಸರ್ಜಿಕಲ್‌ ಸ್ಟ್ರೈಕ್‌ ಮೂಲಕ ವಿರೋಧಿ ದೇಶಕ್ಕೆ ಬಿಸಿಮುಟ್ಟಿಸಿದ ಕೀರ್ತಿ ಪ್ರಧಾನಿ ಮೋದಿ ಅವರದ್ದು.

ಅಲ್ಪಸಂಖ್ಯಾತರ ಒಲೈಕೆಗೆ ಕಾಂಗ್ರೆಸ್‌ ಪಕ್ಷ ಜಾರಿಗೊಳಿಸಿದ್ದ ಆರ್ಟಿಕಲ್‌ ೩೭೦ ರದ್ದು ಪಡಿಸುವ ಮೂಲಕ ಕಾಶ್ಮೀರ ಭಾರತದ ಅಂಗ ಎಂಬುದನ್ನು ಮೋದಿ ಸಾಬೀತು ಪಡಿಸಿದರು. ಇದಕ್ಕೂ ಮುನ್ನ ಭಾರತದ ಜತೆಗೆ ಇದ್ದರು ಕಾಶ್ಮೀರವೇ ಪ್ರತ್ಯೇಲ ರಾಜ್ಯ ಎಂಬಂತೆ ಬಿಂಬಿಸಲಾಗುತ್ತಿತ್ತು. ಈ ಧೋರಣೆ ತೆಗೆದು ಹಾಕಿ ಸಂವಿಧಾನದ ಆಶಯವನ್ನು ಎತ್ತಿ ಹಿಡಿದಿದ್ದು ಮೋದಿ ನೇತೃತ್ವದ ಬಿಜೆಪಿ ಸರಕಾರ ಎಂದು ಮಾಜಿ ಮೇಯರ್‌ ಶಿವಕುಮಾರ್‌ ಹೇಳಿಕೆಯಲ್ಲಿ ತಿಳಿಸಿದ್ದಾರೆ.

key words: Terror attack, Congress, no morality, to blame, security failure,

Terror attack: Congress has no morality to blame Centre’s security failure, says Shivakumar.

Bjp leader and former mayor Shivakumar said the Congress party and its leaders have no morality to blame the security failure of the central government for the terror attack in Pahalgam in Jammu and Kashmir.