ನಾನು ಯುದ್ದದ ಪರ ಅಲ್ಲ, ಶಾಂತಿಯ ಪರ: ಪಾಕ್ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಿ- ಸಿಎಂ ಸಿದ್ದರಾಮಯ್ಯ

ಮೈಸೂರು,ಏಪ್ರಿಲ್,26,2025 (www.justkannada.in):  ನಾನು ಯುದ್ದದ ಪರ ಅಲ್ಲ ಶಾಂತಿಯ ಪರ. ಯುದ್ದದ ಬದಲು ಪಾಕಿಸ್ತಾನ, ಉಗ್ರರ ವಿರುದ್ದ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿ ಎಂದು ಸಿಎಂ ಸಿದ್ದರಾಮಯ್ಯ ಸಲಹೆ ನೀಡಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕೇಂದ್ರ ಸರ್ಕಾರ ಕೈಗೊಡ ಕ್ರಮಗಳಿಗೆ ಸಂಪೂರ್ಣ ಸಹಕಾರ ನೀಡುತ್ತೇವೆ. ಬೆಂಗಳುರು ಸೇರಿದಂತೆ ರಾಜ್ಯದಲ್ಲಿ ಪಾಕ್ ಪ್ರಜೆಗಳ ಪತ್ತೆಗೆ ಸೂಚನೆ ನೀಡಲಾಗಿದೆ.  ಪಾಕ್ ಪ್ರಜೆಗಳನ್ನ ಪತ್ತೆ ಹಚ್ಚಿ ಕೇಂದ್ರಕ್ಕೆ ಮಾಹಿತಿ  ನೀಡುತ್ತೇವೆ ಎಂದರು.

ನಾವು ಯುದ್ದದ ಪರ ಅಲ್ಲ.  ಶಾಂತಿ ಸುವ್ಯವಸ್ಥೆ ಪರ ಇದ್ದೇವೆ ಉಗ್ರರ ವಿರುದ್ದ ಕೇಂದ್ರ ಕಠಿಣ ಕ್ರಮ ಕೈಗೊಳ್ಳಬೇಕು. ಯುದ್ದದ ಬದಲು ಪಾಕ್ ವಿರುದ್ದ ಕ್ರಮ ಕೈಗೊಳ್ಳಲಿ. ಯುದ್ದದ ಬಗ್ಗೆ ಯೋಚನೆ ಬೇಡ ಭದ್ರತೆಯನ್ನ ಬಿಗಿ ಮಾಡಿ ಎಂದು ತಿಳಿಸಿದರು.

Key words:  war, peace, strict action, against, Pakistan, CM Siddaramaiah