ಮೈಸೂರು,ಏಪ್ರಿಲ್,26,2025 (www.justkannada.in): ಪಹಲ್ಗಾಮ್ ಉಗ್ರರ ದಾಳಿ ಆಂತರಿಕ ಭದ್ರತಾ ವೈಫಲ್ಯ ಕಾರಣ. ಇದಕ್ಕೆ ಕೇಂದ್ರ ಬಿಜೆಪಿ ಕಾರಣ. ಘಟನೆ ನೈತಿಕ ಹೊಣೆ ಬಿಜೆಪಿ ಹೊರಬೇಕು ಎಂದು ಗಂಭೀರ ಆರೋಪ ಮಾಡಿದ್ದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಗೆ ಬಿಜೆಪಿ ರಾಜ್ಯ ವಕ್ತಾರ ಎಂ. ಜಿ ಮಹೇಶ್ ತಿರುಗೇಟು ನೀಡಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಎಂ. ಜಿ ಮಹೇಶ್, ಎಂ. ಲಕ್ಷ್ಮಣ್ 5 ಬಾರಿ ಸೋತು ತಲೆಕೆಟ್ಟಿದೆ, ಹುಚ್ಚು ಹಿಡಿದಿದೆ. ಅದಕ್ಕೆ ಬಾಯಿಗೆ ಬಂದಹಾಗೆ ಮಾತಾಡುತ್ತಾರೆ. ಲಕ್ಷ್ಮಣ್ ಚುನಾವಣೆಗಳಲ್ಲಿ ಐದಾರು ಬಾರಿ ಸೋತು ಹುಚ್ಚನಂತೆ ಮಾತಾಡುತ್ತಾರೆ. ಅವರ ಮೇಲೆ ದೇಶ ದ್ರೋಹದ ಕೇಸ್ ದಾಖಲು ಮಾಡುತ್ತೇವೆ. ದೇಶ ಉಗ್ರರ ದಾಳಿಯಿಂದ ದುಃಖದಲ್ಲಿರುವಾಗ ಈ ರೀತಿ ಹುಚ್ಚನಂತೆ ಹೇಳಿಕೆ ಕೊಡುವುದು ಖಂಡನೀಯ.ಈ ಕೂಡಲೇ ಪೋಲಿಸರು ಎಂ. ಲಕ್ಷ್ಮಣ್ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ದೇಶ ಒಂದು ಕಡೆ ಪ್ರತಿಕಾರವನ್ನ ತೀರಿಸಿಕೊಳ್ಳುವ ಕೆಲಸ ಮಾಡುತ್ತಿದೆ. ಯಾವುದೇ ಕಾರಣಕ್ಕೂ ಪಾಪಿಗಳನ್ನ ಬಿಡಬಾರದು ಅವರಿಗೆ ತಕ್ಕ ಪಾಠವನ್ನು ಪ್ರಧಾನಿ ಮೋದಿ ಜೀ ಕಲಿಸುತ್ತಾರೆ. ಪ್ರತಿಕಾರವನ್ನ ತೀರಿಸಿಕೊಳ್ಳುತ್ತಾರೆ. ಈಗಾಗಲೇ ರಾಜತಾಂತ್ರಿಕ ವ್ಯವಸ್ಥೆ ಮೂಲಕ ಪಾಕಿಸ್ತಾನಕ್ಕೆ ಬುದ್ದಿ ಕಲಿಸುವ ನಿಟ್ಟಿನಲ್ಲಿ ಎಲ್ಲಾ ಪಾಕಿಸ್ತಾನದ ಪ್ರಜೆಗಳ ಗಡಿಪಾರು ಮಾಡುವ ನಿರ್ಧಾರವನ್ನ ಕೇಂದ್ರ ಸರ್ಕಾರ ತೆಗೆದುಕೊಂಡಿದೆ ಇದು ಸ್ವಾಗತಾರ್ಹ ಎಂದು ಎಂ.ಜಿ ಮಹೇಶ್ ಹೇಳಿದರು.
Key words: M. Laxman, case of sedition, BJP, M.G. Mahesh , Mysore