ಪಹಲ್ಗಾಮ್ ದಾಳಿ: ಪಾಕ್ ಜೊತೆಗಿನ ಎಲ್ಲಾ ಕ್ರಿಕೆಟ್ ಸಂಬಂಧ ಮುರಿಯಬೇಕು- ಸೌರವ್ ಗಂಗೂಲಿ

ನವದೆಹಲಿ,ಏಪ್ರಿಲ್,26,2025 (www.justkannada.in): ಪಹಲ್ಗಾಮ್ ನಲ್ಲಿ ಉಗ್ರರ ದಾಳಿಗೆ 26 ಮಂದಿ ಬಲಿಯಾದ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ,  ಪಾಕಿಸ್ತಾನದ ಜೊತೆಗಿನ ಎಲ್ಲಾ ಕ್ರಿಕೆಟ್ ಸಂಬಂಧಗಳನ್ನು ಭಾರತ ಮುರಿಯಬೇಕು ಮತ್ತು ಐಸಿಸಿ ಮತ್ತು ಏಷ್ಯನ್ ಪಂದ್ಯಾವಳಿಗಳಲ್ಲಿಯೂ ಆಡಬಾರದು ಎಂದು ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ಸೌರವ್ ಗಂಗೂಲಿ, 100  ರಷ್ಟು ಪಾಕಿಸ್ತಾನದೊಂದಿಗಿನ ಸಂಬಂಧವನ್ನು ಕಡಿದುಕೊಳ್ಳಬೇಕು. ಕಠಿಣ ಕ್ರಮ ತೆಗೆದುಕೊಳ್ಳಬೇಕು. ಪ್ರತಿ ವರ್ಷ ಇಂತಹ ಘಟನೆಗಳು ನಡೆಯುತ್ತಿರುವುದು ತಮಾಷೆಯಾಗಿ ಪರಿಣಮಿಸಿದೆ. ಭಯೋತ್ಪಾದನೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಏಪ್ರಿಲ್ 22 ರಂದು ಪಹಲ್ಗಾಮ್ ನಲ್ಲಿ ಐದರಿಂದ ಆರು ಭಯೋತ್ಪಾದಕರು ಪ್ರವಾಸಿಗರನ್ನು ಗುರಿಯಾಗಿಸಿಕೊಂಡು  ಫೈರಿಂಗ್ ನಡೆಸಿದ್ದರು. ಈ ವೇಳೆ ಕರ್ನಾಟಕದ ಇಬ್ಬರು ಸೇರಿ 26 ಜನರು ಸಾವನ್ನಪ್ಪಿ ಅನೇಕರು ಗಾಯಗೊಂಡಿದ್ದರು.  ಉಗ್ರರ ಈ ಕೃತ್ಯಕ್ಕೆ ಪ್ರಪಂಚದಾದ್ಯಂತ ಖಂಡನೆ ವ್ಯಕ್ತವಾಗಿದೆ.

Key words: Pahalgam attack, cricket , Relationship, Pakistan, Sourav Ganguly