ನವದೆಹಲಿ,ಏಪ್ರಿಲ್,28,2025 (www.justkannada.in): ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರ ದಾಳಿಯಲ್ಲಿ 26 ಮಂದಿ ಪ್ರವಾಸಿಗರು ಸಾವನ್ನಪ್ಪಿರುವ ಘಟನೆಯ ಹಿನ್ನೆಲೆಯಲ್ಲಿ ಪಾಕ್ ವಿರುದ್ದ ಯುದ್ಧದ ಕಾರ್ಮೋಡ ಕವಿದಿರುವ ಮಧ್ಯೆಯೇ ಫ್ರಾನ್ಸ್‍ನಿಂದ 26 ರಫೇಲ್ ಯುದ್ಧ ವಿಮಾನ ಖರೀದಿಗೆ ಸಹಿ ಹಾಕಲು ಭಾರತ ಸರ್ಕಾರ ಮುಂದಾಗಿದೆ.
ಈ ಸಂಬಂಧ ಭಾರತೀಯ ರಕ್ಷಣಾ ಸಚಿವಾಲಯದ ಅಧಿಕಾರಿಗಳು ಮತ್ತು ಭಾರತದಲ್ಲಿನ ಫ್ರೆಂಚ್ ರಾಯಭಾರಿ ಸಹಿ ಹಾಕುವ ಕಾರ್ಯಕ್ರಮದಲ್ಲಿ ಉಭಯ ದೇಶಗಳ ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ. ಬರೋಬ್ಬರಿ 63,000 ಕೋಟಿ ರೂ.ಗಳ ಒಪ್ಪಂದಕ್ಕೆ ಭಾರತ ಮತ್ತು ಫ್ರಾನ್ಸ್ ಸಹಿ ಹಾಕಲು ಮುಂದಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ
ಏಪ್ರಿಲ್ ಮೊದಲ ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭದ್ರತಾ ಸಂಪುಟ ಸಮಿತಿ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಹಸಿರು ನಿಶಾನೆ ನೀಡಿರುವುದಾಗಿ ವರದಿ ತಿಳಿಸಿದೆ. ಈ ಒಪ್ಪಂದದಲ್ಲಿ 22 ಸಿಂಗಲ್ ಸೀಟ್ ರಾಫೆಲ್ ಎಂ ಯುದ್ಧ ವಿಮಾನ ಹಾಗೂ ನಾಲ್ಕು ಎರಡು ಸೀಟ್ ನ ರಾಫೆಲ್ ಎಂ ಯುದ್ಧ ವಿಮಾನ ಸೇರಿದೆ ಎನ್ನಲಾಗಿದೆ.
Key words: France, India, sign, 26 Rafale fighter jets